ವಕೀಲನ ಕೊಲೆ ಖಂಡಿಸಿ ಮೈಸೂರಿನಲ್ಲಿ ಧರಣಿ: ಪ್ರತಿಭಟನೆಗೆ ಮಣಿದ ಸಚಿವರು ಮತ್ತು ಜಿಲ್ಲಾಧಿಕಾರಿ….

Promotion

ಮೈಸೂರು,ಮಾರ್ಚ್,3,2021(www.justkannada.in): ಇತ್ತೀಚೆಗೆ ಹೊಸಕೋಟೆಯಲ್ಲಿ ನಡೆದ ವಕೀಲರೊಬ್ಬರ ಕೊಲೆ ಪ್ರಕರಣವನ್ನ ಖಂಡಿಸಿ ಮೈಸೂರು ವಕೀಲರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.jk

ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದ ಪ್ರತಿಭಟನಾಕಾರರು  ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ವಕೀಲರ ಮೇಲೆ ಹಲ್ಲೆ, ಕೊಲೆ ಹಾಗೂ ದೌರ್ಜನ್ಯ ಹೆಚ್ಚಾಗುತ್ತಿದೆ. ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೆ ತರುವಂತೆ ಆಗ್ರಹಿಸಿದರು.

ಪ್ರತಿಭಟನಾ ಸ್ಥಳಕ್ಕೆ ಡಿಸಿ ರೋಹಿಣಿ ಸಿಂಧೂರಿ, ಸಚಿವ ಸಿಪಿ ಯೋಗೇಶ್ವರ್ ಆಗಮಿಸುವಂತೆ‌ ಪ್ರತಿಭಟನಾನಿರತ ವಕೀಲರು ಪಟ್ಟು ಹಿಡಿದರು. ಅಲ್ಲದೆ ಸ್ಥಳಕ್ಕೆ ಬಂದ ತಹಶಿಲ್ದಾರ್ ಹಾಗೂ ಎಸಿಗೆ ಮನವಿ ಪತ್ರ ನೀಡದೇ ಸ್ವತಃ ಡಿಸಿಯೇ ಸ್ಥಳಕ್ಕೆ ಬರುಬೇಕು ಎಂದು ಆಗ್ರಹಿಸಿದರು.Mysore- condemns- murder – hosakote-lawyer-protest

ವಕೀಲರ ಪ್ರತಿಭಟನೆಗೆ ಮಣಿದ ಮೈಸೂರು ಡಿಸಿ ರೋಹಿಣಿ ಸಿಂಧೂರಿ, ಸಚಿವ ಸಿಪಿ ಯೋಗೇಶ್ವರ್, ಪ್ರತಿಭಟನೆ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದರು. ಇದೇ ವೇಳೆ ನಾಳಿನ ಅಧಿವೇಶನದಲ್ಲಿ ಈ ವಿಚಾರವಾಗಿ ಚರ್ಚಿಸುವಂತೆ ಸಚಿವ ಯೋಗೇಶ್ವರ್ ಗೆ ಪ್ರತಿಭಟನಾಕಾರರು ‌ಒತ್ತಾಯಿಸಿದರು. ಈ ಬಗ್ಗೆ ಸಿಎಂ ಜೊತೆ ಚರ್ಚಿಸುವುದಾಗಿ ಸಚಿವ ಸಿ.ಪಿ ಯೋಗೇಶ್ವರ್ ಭರವಸೆ ನೀಡಿದರು.

Key words: Mysore- condemns- murder – hosakote-lawyer-protest