ಬೆಳ್ಳಂಬೆಳಿಗ್ಗೆಯೇ ಸಚಿವ ಜಿ.ಟಿ ದೇವೇಗೌಡರಿಂದ ಮೈಸೂರು ನಗರ ಪ್ರದಕ್ಷಿಣೆ: ಶಾಸಕರು ಮತ್ತು ಅಧಿಕಾರಿಗಳಿಂದ ಸಾಥ್

Promotion

ಮೈಸೂರು,ಜು,2,2019(www.justkannada.in): ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ ದೇವೇಗೌಡರು, ಬೆಳ್ಳಂ ಬೆಳಗ್ಗೆಯೇ ಮೈಸೂರು ನಗರ ಸಂಚಾರ ಮಾಡುತ್ತಿದ್ದು ಅಧಿಕಾರಿಗಳು ಸಾಥ್ ನೀಡಿದ್ದಾರೆ.

ನಗರ ನಾಲ್ಕು ಕ್ಷೇತ್ರಗಳಲ್ಲಿ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ನಗರ ಪ್ರದಕ್ಷಿಣೆ ಮಾಡುತ್ತಿದ್ದಾರೆ. ನಗರ ವ್ಯಾಪ್ತಿಗೆ ಬರಲಿರುವ ಚಾಮುಂಡೇಶ್ವರಿ ಕ್ಷೇತ್ರದ ವಾರ್ಡ್ ಗಳು ಹಾಗೂ ಕೆ ಆರ್ ಕ್ಷೇತ್ರವನ್ನ  ಸಿಟಿರಂಡ್ಸ್ ಹಾಕುತ್ತಿದ್ದು, ಕ್ಷೇತ್ರಗಳ ಪ್ರದಕ್ಷಿಣೆಯಲ್ಲಿ ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ , ಪ್ರತಿ ಕ್ಷೇತ್ರದ ಶಾಸಕರು, ಪಾಲಿಕೆ ಸದಸ್ಯರು ಹಾಗೂ ಪಾಲಿಕೆ ಅಧಿಕಾರಿಗಳ ತಂಡಗಳು ಪಾಲ್ಗೊಂಡಿದ್ದಾರೆ

ಈ ಕ್ಷೇತ್ರದ ಬಳಿಕ ಎನ್.ಆರ್ ಕ್ಷೇತ್ರ ಹಾಗೂ ಇಂದು ಮಧ್ಯಾಹ್ನ ಚಾಮರಾಜ ಕ್ಷೇತ್ರದಲ್ಲೂ ಸಚಿವ ಜಿ.ಟಿ ದೇವೇಗೌಡ ಪ್ರದಕ್ಷಿಣೆ ಹಾಕಲಿದ್ದಾರೆ.  ಸಚಿವ ಜಿಟಿ ದೇವೇಗೌಡರಿಗೆ ಶಾಸಕ ಎಸ್.ಎ ರಾಮದಾಸ್ , ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಹಾಗೂ ಪಾಲಿಕೆ ಸದಸ್ಯರು ಗೆ ಸಾಥ್ ನೀಡುತ್ತಿದ್ದಾರೆ.

Key words: Mysore- City –rounds-Minister -GT Deve Gowda