ಕೋವಿಡ್ ನಿಯಮ ಕಟ್ಟುನಿಟ್ಟಿನ ಪಾಲನೆಗೆ ಮಾಧ್ಯಮ ಸಹಕಾರ ಕೋರಿದ ಮೈಸೂರು ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ…

Promotion

ಮೈಸೂರು, ನವೆಂಬರ್,4,2020(www.justkannada.in): ಸಭೆ ಸಮಾರಂಭ, ಧಾರ್ಮಿಕ ಕಾರ್ಯಕ್ರಮ, ಸರಣಿಗಳಲ್ಲಿ ಕೋವಿಡ್ ಮಾರ್ಗಸೂಚಿ ವ್ಯಾಪಕ ಉಲ್ಲಂಘನೆ ಕಂಡು ಬರುತ್ತಿರುವ ಹಿನ್ನೆಲೆ ಮೈಸೂರು ನಗರ ಪೋಲೀಸ್ ಆಯುಕ್ತ ಚಂದ್ರಗುಪ್ತ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.jk-logo-justkannada-logo

ಕೋವಿಡ್ ನಿಯಮ ಕಟ್ಟುನಿಟ್ಟಿನ ಪಾಲನೆಗೆ ಮಾಧ್ಯಮ ಸಹಕಾರ ಕೋರಿರುವ ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ, ಕಳೆದ ಒಂಬತ್ತು ತಿಂಗಳಿನಿಂದ ಸೋಂಕು ಹರಡುವಿಕೆ ತಡೆಯಲು ಪ್ರಯತ್ನ ನಡೆಯುತ್ತಲೇ ಇದೆ. ಲಾಕ್ ಡೌನ್ ಸಡಿಲಗೊಳಿಸಿದ ನಂತರ ಜನ ಜೀವನ ಸಹಜ ಸ್ಥಿತಿಗೆ ಮರಳುವ ವಿಶ್ವಾಸದ ನಡುವೆ ಎಲ್ಲೋ ಒಂದು ಕಡೆ ಹಿನ್ನಡೆಯಾಗುತ್ತಿದೆ. ಸಭೆ, ಸಮಾರಂಭದಲ್ಲಿ ಸಾಮಾಜಿಕ ಅಂತರ ಮಾಯವಾಗಿದೆ. ಪೋಟೊ, ವೀಡಿಯೊಗೆ ಮುಖ ತೋರಿಸುವ ಸಲುವಾಗಿ ಮಾಸ್ಕ್ ಕತ್ತಿನ ಬಳಿ ಸರಿಸುತ್ತಾರೆ. ಸಾಮಾಜಿಕ ಅಂತರ ಕಾಪಾಡದೆ, ಮಾಸ್ಕ್ ಧರಿಸದ ಯಾವುದೇ ಕಾರ್ಯಕ್ರಮದಲ್ಲಿ ಪೋಟೊ,  ವೀಡಿಯೋ ತೆಗೆಯುವುದಿಲ್ಲ ಎಂದು  ಅತಂಹ ಕಾರ್ಯಕ್ರಮಗಳನ್ನು ಪ್ರಚಾರ ಪಡಿಸುವುದನ್ನು ನಿಷೇಧಿಸಿ. ಅಂತಹವರಿಗೆ ಒತ್ತಾಸೆ ನೀಡದೆ ಈ ಈ ನೀತಿಯ‌ನ್ನು ಕಟ್ಟುನಿಟ್ಟಾಗಿ ಪಾಲಿಸಿ ಎಂದು ಮನವಿ ಮಾಡಿದರು.mysore-city-police-commissioner-chandragupta-media-cooperation-strict-covid-rule

ಕೋವಿಡ್ ಮಾರ್ಗಸೂಚಿ ಪಾಲಿಸದೆ, ಕಾನೂನು ಉಲ್ಲಂಘನೆ ಮಾಡುವಂತಹ ಪ್ರಯತ್ನಗಳು ಕಂಡುಬಂದರೆ ತಕ್ಷಣ ಪೋಲೀಸ್ ಕಂಟ್ರೋಲ್ ರೋಂಗೆ ಮಾಹಿತಿ ನೀಡಿ ಎಂದು ಮಾಧ್ಯಮಗಳಲ್ಲಿ ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ ಮನವಿ ಮಾಡಿದರು.

Key words: Mysore city- police commissioner -Chandragupta – media -cooperation-strict covid rule.