ಅರ್ನಬ್ ಗೋಸ್ವಾಮಿ ಬಂಧನ, ವಾಕ್ ಸ್ವಾತಂತ್ರ್ಯದ ಮೇಲೆ ನಡೆದ ದಾಳಿ : ಬಿ.ಎಲ್.ಸಂತೋಷ್ ಟ್ವೀಟ್

ಬೆಂಗಳೂರು,ನವೆಂಬರ್, 04,2020(www.justkannada.in) : ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಬ್ ಗೋಸ್ವಾಮಿ ಬಂಧನವಾದ ಹಿನ್ನೆಲೆ ಇದು ವಾಕ್ ಸ್ವಾತಂತ್ರ್ಯದ ಮೇಲೆ ನಡೆದ ದಾಳಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಟ್ವೀಟ್ ಮಾಡಿದ್ದಾರೆ.jk-logo-justkannada-logoಮಹರಾಷ್ಟ್ರ ಸರ್ಕಾರ, ಕಾಂಗ್ರೆಸ್ ಪಕ್ಷ ಹಾಗೂ ಮುಂಬೈ ಪೊಲೀಸ್ ಕಮಿಷನರ್ ವಿರುದ್ಧ ಆಕ್ರೋಶವ್ಯಕ್ತಪಡಿಸಿದ್ದು, ಇದೊಂದು ಪಾಪಕೃತ್ಯ ಎಂದು ಬಿ.ಎಲ್.ಸಂತೋಷ್ ಈ ಸಂಬಂಧ ಸರಣಿ ಟ್ವಿಟರ್ ನಲ್ಲಿ ಅಸಮಾಧಾನವ್ಯಕ್ತಪಡಿಸಿದ್ದಾರೆ.

ಮುಂಬೈ ಪೊಲೀಸರು ಉಗ್ರ ಅಜ್ಮಲ್ ಕಸಬ್‌ಗೆ ಬಿರಿಯಾನಿ ತಿನ್ನಿಸಿದ್ದರು. ಆದ್ರೆ, ಇದೀಗ ಅವರನ್ನು ಪ್ರಶ್ನಿಸಿದ ತಪ್ಪಿಗೆ ಮಾಧ್ಯಮಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ವಾಕ್‌ ಸ್ವಾತಂತ್ರ್ಯದ ಮೇಲೆ ನಂಬಿಕೆ ಇರುವ ಎಲ್ಲರೂ ದನಿ ಎತ್ತುವ ಸಮಯವಿದು ಎಂದು ಸಂತೋಷ್‌ ಕರೆ ನೀಡಿದ್ದಾರೆ.

ಮಾಧ್ಯಮ ಸಂಸ್ಥೆಗಳು, ಸಂಪಾದಕರು, ವರದಿಗಾರರ ಒಕ್ಕೂಟಗಳು ಇದೀಗ ಮೌನವಾಗಿದ್ದು, ವ್ಯವಸ್ಥಿತವಾಗಿ ಮಹಾರಾಷ್ಟ್ರ ಸರ್ಕಾರಕ್ಕೆ ನೆರವಾಗುತ್ತಿವೆ ಎಂದು ಆರೋಪಿಸಿದ್ದಾರೆ. ನೀವು ಇದರ ವಿರುದ್ಧ ದನಿ ಎತ್ತದಿದ್ದರೆ ದೀರ್ಘ ಕಾಲ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.Arnab Goswami-arrested-attack-freedom-speech-Tweet-B.L.Santosh1975ರಲ್ಲಿ ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿ ನೆನಪಿಸುವ ಕೆಲಸ

ಮಹಾರಾಷ್ಟ್ರ ಸರ್ಕಾರ ಹಾಗೂ ಪೊಲೀಸರು 1975ರಲ್ಲಿ ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಯನ್ನು ನೆನಪಿಸುವಂಥಾ ಕೆಲಸ ಮಾಡುತ್ತಿದ್ದಾರೆ ಎಂದು ಬಿ. ಎಲ್. ಸಂತೋಷ್ ಕಿಡಿಕಾರಿದ್ದಾರೆ.Arnab Goswami-arrested-attack-freedom-speech-Tweet-B.L.Santosh

key words : Arnab Goswami-arrested-attack-freedom-speech-Tweet-B.L.Santosh