ಮೈಸೂರು ನಗರ ನೂತನ ಡಿಸಿಪಿಯಾಗಿ ಡಾ. ಎ.ಎನ್ ಪ್ರಕಾಶ್ ಗೌಡ ನೇಮಕ..

Promotion

ಮೈಸೂರು,ಆ,28,2019(www.justkannada.in):  ಮೈಸೂರು ನಗರ ನೂತನ ಡಿಸಿಪಿಯಾಗಿ ಡಾ. ಎ. ಎನ್ ಪ್ರಕಾಶ್ ಗೌಡ ಅವರನ್ನ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿಯಾಗಿ ಡಾ. ಎ. ಎನ್ ಪ್ರಕಾಶ್ ಗೌಡ ಅವರನ್ನ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಹಾಸನ ಎಸ್.ಪಿಯಾಗಿದ್ದ ಡಾ.ಎ.ಎನ್. ಪ್ರಕಾಶ್ ಗೌಡ ಅವರಿಗೆ ಹಾಸನದಿಂದ ವರ್ಗಾವಣೆಯಾದ ನಂತರ ಯಾವುದೇ ಸ್ಥಳ ನಿಗದಿಯಾಗಿರಲಿಲ್ಲ.

ಇದೀಗ ಮೈಸೂರು ಡಿಸಿಪಿಯಾಗಿದ್ದ ಮುತ್ತುರಾಜು ಅವರ ಜಾಗಕ್ಕೆ ಎ.ಎನ್ ಪ್ರಕಾಶ್ ಗೌಡ ಅವರನ್ನ ನಿಯುಕ್ತಿ ಮಾಡಲಾಗಿದೆ.

Key words: Mysore City – new DCP- AN Prakash Gowda -appointed