ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಸಮೀಕ್ಷೆಗೆ ಮುಂದಾದ ಮೈಸೂರು ಮಹಾನಗರ ಪಾಲಿಕೆ.

ಮೈಸೂರು,ಅಕ್ಟೋಬರ್,19,2021(www.justkannada.in): ಕಟ್ಟಡ ಕುಸಿತದಿಂದಾಗುವ ಅಪಾಯ ತಪ್ಪಿಸಲು ಮೈಸೂರು ಮಹಾನಗರ ಪಾಲಿಕೆ ಮುನ್ನೆಚರಿಕಾ ಕ್ರಮ ಕೈಗೊಳ್ಳುತ್ತಿದ್ದು, ಇದೀಗ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಸಮೀಕ್ಷೆಗೆ ಮುಂದಾಗಿದೆ.

ಮೈಸೂರು ನಗರಾದಾಧ್ಯಂತ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಸಮೀಕ್ಷೆ ನಡೆಸಲು ಅಧಿಕಾರಿಗಳಿಗೆ ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ ರೆಡ್ಡಿ ಸೂಚನೆ ನೀಡಿದ್ದಾರೆ. ಮಳೆ ಹಿನ್ನೆಲೆ ಕುಸಿದು ಬೀಳುವ ಹಂತದಲ್ಲಿರುವ ಕಟ್ಟಡಗಳು, ಮನೆಗಳು ತೆರವಿಗೆ ಚಿಂತನೆ ನಡೆಸಿದ್ದು, ನಗರದ 9 ವಲಯದ ಅಧಿಕಾರಿಗಳಿಗೆ ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ ರೆಡ್ಡಿ ನಿರ್ದೇಶನ ನೀಡಿದ್ದಾರೆ.

ಪಾಲಿಕೆ, ಮುಡಾ,ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಕಚೇರಿ, ವಾಣಿಜ್ಯ ಕಟ್ಟಡ, ವಸತಿ ಕಟ್ಟಡಗಳ ಸಮೀಕ್ಷೆ ನಡೆಸಿ ಅಪಾಯದ ಹಂತದಲ್ಲಿರುವ ಕಟ್ಟಡಗಳ ಪಟ್ಟಿ ಸಿದ್ದಪಡಿಸಲು ಸೂಚನೆ ನೀಡಲಾಗಿದ್ದು, ಅಂತಹ ಕಟ್ಟಡ ಮಾಲೀಕರಿಗೆ, ಸಂಬಂಧಪಟ್ಟ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಲು ಮೈಸೂರು ಪಾಲಿಕೆ ಮುಂದಾಗಿದೆ.

Key words: Mysore city corporation- Survey – Dilapidated -Buildings.