ಕನಕದಾಸ ನಗರ ವೃತ್ತದಲ್ಲಿ ದಿಢೀರನೆ ಪ್ರತ್ಯಕ್ಷವಾದ ‘ ಡಾ.ಬಾಲಗಂಗಾಧರನಾಥ ಸ್ವಾಮೀಜಿ ವೃತ್ತ ‘ ಈಗ ವಿವಾದಕ್ಕೆ..

kannada t-shirts

 

ಮೈಸೂರು, ಜೂ.28, 2019 : (www.justkannada.in news) : ನಗರದ ದಟ್ಟಗಳ್ಳಿಯ ರಿಂಗ್ ರಸ್ತೆ ಸಮೀಪದ ಕನಕದಾಸ ನಗರ ವೃತ್ತದಲ್ಲಿ ದಿಢೀರನೆ ‘ ಡಾ.ಬಾಲಗಂಗಾಧರನಾಥ ಸ್ವಾಮೀಜಿ ವೃತ್ತ ‘ ಎಂಬ ನಾಮಫಲಕ ಎದ್ದಿರುವುದು ಈಗ ವಿವಾದಕ್ಕೆ ಎಡೆಮಾಡಿದೆ.

ನಗರ ಪಾಲಿಕೆ ವ್ಯಾಪ್ತಿಯ ಯಾವುದೇ ವೃತ್ತ, ಬಡಾವಣೆಗಳಲ್ಲಿ ಗಣ್ಯರ ಹೆಸರನ್ನು ಇಡಬೇಕಾದಲ್ಲಿ ಅದಕ್ಕೆ ಪಾಲಿಕೆ ಅನುಮೋಧನೆ ಕಡ್ಡಾಯ. ಈ ಹಿಂದೆ ಯಾವುದಾದರೂ ವೃತ್ತಕ್ಕೆ ಅಥವಾ ರಸ್ತೆಗೆ ಹೆಸರಿಟ್ಟಿದ್ದರೆ ಮತ್ತೆ ಅದೇ ಹೆಸರು ನಾಮಕರಣ ಮಾಡುವಂತಿಲ್ಲ. ಇದು ನಿಯಮ. ಆದ್ದರಿಂದಲೇ ಗೊಂದಲಗಳಿಗೆ ಆಸ್ಪದ ಬೇಡವೆಂಬ ಕಾರಣಕ್ಕೆ ಕೌನ್ಸಿಲ್ ಸಭೆಯಲ್ಲೇ ಈ ಬಗ್ಗೆ ನಿರ್ಣಯ ಕೈಗೊಳ್ಳುವ ತೀರ್ಮಾನಕ್ಕೆ ಬರಲಾಗಿದೆ.

ಆದರೆ ಈ ನಿಯಮವನ್ನು ಪಾಲಿಸದೆ, ಪಾಲಿಕೆಗೆ ಯಾವುದೇ ಮನವಿಯನ್ನು ಸಲ್ಲಿಸದೆ, ಅನುಮತಿಯನ್ನು ಪಡೆಯದೆ ಕನಕದಾಸ ನಗರದ ವೃತ್ತಕ್ಕೆ ‘ ಡಾ.ಬಾಲಗಂಗಾಧರನಾಥ ಸ್ವಾಮೀಜಿ ವೃತ್ತ ‘ ಎಂಬ ನಾಮಫಲಕ ಅಳವಡಿಸಿರುವುದು ಈಗ ಸಮಾಜದ ಸಾಮರಸ್ಯ ಹಾಳುವೆಡವಿದಂತಾಗಿದೆ.

ವಿವಾದಕ್ಕೆ ಕಾರಣವಾಗಿದ್ದ ರಾಮಕೃಷ್ಣ ವೃತ್ತ :

ಮೈಸೂರಿನ ದಟ್ಟಗಳ್ಳಿ ಸಮೀಪವೇ ಇರುವ ರಾಮಕೃಷ್ಣನಗರದದ ವೃತ್ತ ಸಹ ವಿವಾದಕ್ಕೆ ಕಾರಣವಾಗಿತ್ತು. ಈ ವೃತ್ತದಲ್ಲಿ ಬಸವಣ್ಣ, ಅಂಬೇಡ್ಕರ್, ಕನಕ..ಮುಂತಾದವರ ಮೂರ್ತಿಗಳನ್ನು ಸ್ಥಾಪಿಸಲು ಒತ್ತಾಯ ನಿರ್ಮಾಣವಾದ ಕಾರಣ ವಿವಾದ ಉಂಟಾಗಿತ್ತು. ಕಡೆಗೆ ರಾಮಕೃಷ್ಣನಗರದ ಪಾಲಿಕೆ ಸದಸ್ಯರಾಗಿದ್ದ ಶಂಕರ್, ಇದು ರಾಮಕೃಷ್ಣನಗರ. ಅದ್ದರಿಂದ ರಾಮಕೃಷ್ಣರಿಗೆ ಸಂಬಂಧಿಸಿದ ಹೆಸರು ನಾಮಕರಣ ಮಾಡಬೇಕು ಎಂದು ಪಟ್ಟು ಹಿಡಿದರು. ಜತೆಗೆ ಇತರ ಯಾವುದೇ ಒತ್ತಡಕ್ಕೂ ಜಗ್ಗದೆ ಉಪವಾಸ ಸತ್ಯಾಗ್ರಹ ನಡೆಸುವ ಬೆದರಿಕೆ ಹಾಕಿದ್ದರಿಂದ ಕಡೆಗೆ ರಾಮಕೃಷ್ಣ ಪರಮಹಂಸರ ಪ್ರತಿಮೆ ಸ್ಥಾಪಿಸಲಾಯಿತು.
ಇದೀಗ ಈ ವೃತ್ತದಿಂದ ಕೆಲವೇ ಕೆಲ ದೂರದಲ್ಲಿರುವ ಕನಕದಾಸ ನಗರ ವೃತ್ತ ವಿವಾದಕ್ಕೆ ಗುರಿಯಾಗಿರುವುದು ವಿಪರ್ಯಾಸ. ಪಾಲಿಕೆ ನಿಯಮ ಉಲ್ಲಂಘಿಸಿ ಕೆಲವೇ ಕೆಲ ವ್ಯಕ್ತಿಗಳು ಎಸಗುವ ಪ್ರಮಾಧಗಳಿಂದ ಗಣ್ಯರ ವ್ಯಕ್ತಿತ್ವಕ್ಕೆ ಕಪ್ಪುಮಸಿ ಬಳಿದಂತಾಗುತ್ತದೆ.

——-
key words : mysore-city-corporation-kanakadasa.nagara-circle-bgs

website developers in mysore