ಡೆತ್ ನೋಟ್ ಬರೆದಿಟ್ಟು ಮೈಸೂರಿನ ಉದ್ಯಮಿ ಆತ್ಮಹತ್ಯೆ.

Promotion

ಮೈಸೂರು,ಮೇ,9,2022(www.justkannada.in): ರೆಸಾರ್ಟ್‌  ಅಧ್ಯಕ್ಷರೊಬ್ಬರ ವಿರುದ್ಧ ವಂಚನೆ ಆರೋಪ ಮಾಡಿ ಮೈಸೂರಿನ ಉದ್ಯಮಿಯೊಬ್ಬರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮೈಸೂರಿನ ಗಣೇಶ ನಗರದ ನಿವಾಸಿ ಶರತ್ ಆತ್ಮಹತ್ಯೆಗೆ ಶರಣಾದ ಉದ್ಯಮಿ. ನಗರದ ಜಂಗಲ್  ಲಾಡ್ಜಸ್  ರೆಸಾರ್ಟ್‌  ಅಧ್ಯಕ್ಷ ಅಪ್ಪಣ್ಣ ವಿರುದ್ಧ ವಂಚನೆ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸೋಲಾರ್ ಕಂಪನಿಗೆ ಬಂಡವಾಳ ಹೂಡಿಕೆ ವಿಚಾರದಲ್ಲಿ ವಂಚನೆ ಮಾಡಿರುವ ಆರೋಪ ಕೇಳಿ ಬಂದಿದೆ. ಹೊಸ ಕಂಪನಿಗೆ ಶೇ‌.50ರಷ್ಟು ಬಂಡವಾಳ ಹೂಡಿದ್ದು, ದಿಢೀರನೆ ನನ್ನ ಪಾಲುದಾರಿಕೆಯಿಂದ ಬಿಡುಗಡೆ ‌‌ಮಾಡಿಲ್ಲ ಹಣವನ್ನೂ ಪ್ರವೀಣ್ ಹಿಂದಿರುಗಿಸಿಲ್ಲ. ಜೊತೆಗೆ ಅಪ್ಪಣ್ಣ 8 ಲಕ್ಷ ರೂ. ಪಡೆದಿದ್ದು ಹಣವನ್ನೂ ಹಿಂದಿರುಗಿಸಿಲ್ಲ. ನನ್ನ ಸಾವಿಗೆ ಇವರಿಬ್ಬರೇ ಕಾರಣ ಎಂದು ಶರತ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಆತ್ಮಹತ್ಯೆಗೂ ಮುನ್ನ ತನ್ನ ಹೆಂಡತಿ ಜೊತೆ ಮೋಸದ ಬಗ್ಗೆ ಹೇಳಿದ್ದಕೊಂಡಿದ್ದರು. ಇನ್ನು ಅಪ್ಪಣ್ಣನ ಮೇಲೆ ಕ್ರಮಕ್ಕೆ ಡೆತ್ ನೋಟ್ ನಲ್ಲಿ  ಶರತ್ ಒತ್ತಾಯ ಮಾಡಿದ್ದಾರೆ. ಮೈಸೂರಿನ ಎನ್.ಆರ್‌. ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ಅಡಿ ಅಪ್ಪಣ್ಣ ಹಾಗೂ ಪ್ರವೀಣ್ ವಿರುದ್ದ ಏಫ್ ಐ ಆರ್ ದಾಖಲಾಗಿದೆ.

key words: Mysore-businessman-commits suicide- death note