‘ ಬ್ರಿಂಗ್ ಬ್ಯಾಕ್ ರೋಹಿಣಿ ಸಿಂಧೂರಿ’ : ಈಗ Change.org ಟಾಪ್ ಟ್ರೆಂಡಿಂಗ್.

Promotion

 

ಮೈಸೂರು, ಜೂ.13, 2021 : (www.justkannada.in news ) ‘ ಬ್ರಿಂಗ್ ಬ್ಯಾಕ್ ರೋಹಿಣಿ ಸಿಂಧೂರಿ’ ಕ್ಯಾಂಪೇನ್ ದಾಖಲೆ ಮುಟ್ಟುವತ್ತ ದಾಪುಗಾಲು ಹಾಕುತ್ತಿದೆ. ಈಗಾಗಲೇ 1.30 ಲಕ್ಷಕ್ಕೂ ಹೆಚ್ಚು ಮಂದಿ ಬೆಂಬಲ ಸೂಚಿಸಿದ್ದು, ಸಂಜೆ ವೇಳೆಗೆ ಒಂದುವರೆ ಲಕ್ಷ ಜನರ ಬೆಂಬಲಗಳಿಸಿ ದಾಖಲೆ ನಿರ್ಮಿಸಲಿದೆ.

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಪರ ಆನ್ ಲೈನ್ ಕ್ಯಾಂಪೇನ್. ರೋಹಿಣಿ ಸಿಂಧೂರಿಯನ್ನು ಮತ್ತೆ ಮೈಸೂರಿಗೆ ಡಿಸಿಯಾಗಿ ನೇಮಿಸುವಂತೆ ಒತ್ತಾಯಿಸಿ ನಡೆಯುತ್ತಿರುವ ಅಭಿಯಾನ. ಸದ್ಯ ಒಂದು ಲಕ್ಷಕ್ಕು ಹೆಚ್ಚು ಮಂದಿಯಿಂದ ಸಹಿ ಸಂಗ್ರಹ.
Change.org ಸಂಸ್ಥೆ ಮೂಲಕ ನಡೆಯುತ್ತಿರುವ ಅಭಿಯಾನ. ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿರುವ ರೋಹಿಣಿ ಪರ ಕ್ಯಾಂಪೇನ್.

 

ರೋಹಿಣಿ ಸಿಂಧುರಿಯನ್ನು ಮರಳಿ ಮೈಸೂರಿಗೆ ನೇಮಿಸುವಂತೆ ಮನವಿ. ಸಹಿ ಸಂಗ್ರಹ ಅಭಿಯಾನದ ಮೂಲಕ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಗೆ ಮನವಿ. ಭೂ ಮಾಫಿಯಾದ ಬಲಿಪಶು ಎಂದು ರೋಹಿಣಿ ಸಿಂಧೂರಿ ಅವರು ಹೇಳಿಕೊಂಡ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಬೆಂಬಲ. ಈಗಾಗಲೇ 1.30 ಲಕ್ಷಕ್ಕೂ ಹೆಚ್ಚು ಮಂದಿ ಈ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದು, ಸಂಜೆ ವೇಳೆಗೆ ಒಂದುವರೆ ಲಕ್ಷ ಜನರ ಬೆಂಬಲಗಳಿಸಿ ದಾಖಲೆ ನಿರ್ಮಿಸಲಿದೆ.

key words : mysore-bring-back-rohini-sindhoori-dc-social-media-change.org-trending