ನನ್ನ ಸ್ಪರ್ಧೆ ಬಗ್ಗೆ ಹೈಕಮಾಂಡ್ ನಿರ್ಧಾರ: ವರುಣಾದಲ್ಲಿ ಯಾರಿಗೆ ಟಿಕೆಟ್ ಕೊಟ್ರೂ ಗೆಲ್ತೇವೆ- ಬಿವೈ ವಿಜಯೇಂದ್ರ.

Promotion

ಮೈಸೂರು,ಮಾರ್ಚ್,31,2023(www.justkannada.in): ನನ್ನ ಸ್ಪರ್ಧೆ ಬಗ್ಗೆ ಹೈಕಮಾಂಡ್ ನಿರ್ಧಾರ  ಮಾಡುತ್ತದೆ.  ವರುಣಾದಲ್ಲಿ ಯಾರಿಗೆ ಟಿಕೆಟ್ ಕೊಟ್ಟರೂ ನಾವೇ ಗೆಲ್ಲುತ್ತೇವೆ ಎಂದು  ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

ಮೈಸೂರಿಗೆ ಆಗಮಿಸಿದ ಬಿವೈ ವಿಜಯೇಂದ್ರಗೆ ವರುಣಾಕ್ಷೇತ್ರದ ಬಿಜೆಪಿ ಮುಖಂಡರು ಸ್ವಾಗತ ಕೋರಿದರು. ವರುಣಾದಲ್ಲಿ ತಮ್ಮ ಸ್ಪರ್ಧೆ ಬಗ್ಗೆ ಪ್ರತಿಕ್ರಿಯಿಸಿದ ಬಿವೈ ವಿಜಯೇಂದ್ರ,  ಖಾಸಗಿ ಕಾರ್ಯಕ್ರಮ ನಿಮಿತ್ತ ಮೈಸೂರಿಗೆ ಆಗಮಿಸಿದ್ದೇನೆ.  ಪಕ್ಷ ಎಲ್ಲಿ ಟಿಕೆಟ್ ನೀಡುತ್ತೋ ಅಲ್ಲಿ ಸ್ಪರ್ಧಿಸುತ್ತೇನೆ. ಶಿಕಾರಿಪುರದಲ್ಲಿ ಸ್ಪರ್ಧಿಸುತ್ತಾರೆ ಎಂದು ಬಿಎಸ್ ವೈ ಹೇಳಿದ್ದಾರೆ. ಯಾವುದೇ ಕ್ಷೇತ್ರ ಕೂಡ ಅಸಾಧ್ಯವಲ್ಲ. ಈಗಾಗಲೇ ಒಂದು ಸುತ್ತು ಶಿಕಾರಿಪುರ ಕ್ಷೇತ್ರದ ಪ್ರವಾಸ ಮಾಡಿದ್ದೇನೆ. ರಾಜ್ಯದ 224 ಕ್ಷೇತ್ರಗಳಲ್ಲೂ ಸ್ಪರ್ಧೆ ಬಗ್ಗೆ ಅಭಿಪ್ರಾಯ ಸಂಗ್ರಹವಾಗುತ್ತಿದೆ. ಅಂತಿಮವಾಗಿ ನನ್ನ ಸ್ಪರ್ಧೆ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತೆ ಎಂದರು.

ವರುಣಾ ವಿಧಾನಸಭಾ ಕ್ಷೇತ್ರ ಬಗ್ಗೆ ಹೆಚ್ಚು ಚರ್ಚಯಾಗುತ್ತಿದೆ. ವರುಣಾದಲ್ಲಿ ಸಿದ‍್ಧರಾಮಯ್ಯ ಸ್ಪರ್ಧೆಯಿಂದ ಹೆಚ್ಚು ಚರ್ಚೆಯಾಗುತ್ತಿದೆ.  ನನಗೆ ಟಿಕೆಟ್ ಕೊಡ್ತಾರೆ ಅನ್ನೋದು ಖಚಿತವಾಗಿಲ್ಲ ಇನ್ನೆಲ್ಲಿ 2ಕಡೆ ಸ್ಪರ್ಧಿಸಲಿ ಎಂದು ಮಾಧ್ಯಮದವರ ಪ್ರಶ್ನಗೆ ವಿಜಯೇಂದ್ರ ಉತ್ತರಿಸಿದರು.

Key words: mysore-bjp-BY Vijayendra- tickets – Varuna