ಸಿದ್ಧರಾಮಯ್ಯ ವರುಣಾ ಮತ್ತು ಕೋಲಾರದಲ್ಲಿ ಸ್ಪರ್ಧಿಸಿ ಎರಡು ಕ್ಷೇತ್ರದಲ್ಲೂ ಗೆಲ್ಲುತ್ತಾರೆ- ಶಾಸಕ ಎಸ್ ಎನ್ ನಾರಾಯಣಸ್ವಾಮಿ.

ಕೋಲಾರ,ಮಾರ್ಚ್,31,2023(www.justkannada.in):  ಮಾಜಿ ಸಿಎಂ ಸಿದ್ಧರಾಮಯ್ಯ ಅವರು ವರುಣಾ ಮತ್ತು ಕೋಲಾರದಲ್ಲಿ ಸ್ಪರ್ಧಿಸಿ ಎರಡು ಕ್ಷೇತ್ರದಲ್ಲೂ ಗೆಲ್ಲುತ್ತಾರೆ ಎಂದು ಕಾಂಗ್ರೆಸ್ ಶಾಸಕ ಎಸ್ ಎನ್ ನಾರಾಯಣಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ಬಂಗಾರಪೇಟೆಯಲ್ಲಿ ಇಂದು ಮಾತನಾಡಿದ ಶಾಸಕ ಎಸ್.ಎನ್ ನಾರಾಯಣಸ್ವಾಮಿ, ಸಿದ್ಧರಾಮಯ್ಯ ವರುಣಾ ಮತ್ತು ಕೋಲಾರ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಾರೆ. ಸಿದ್ದರಾಮಯ್ಯ ಸ್ಪರ್ಧೆ ವಿಚಾರವಾಗಿ ಯಾವುದೇ ಗೊಂದಲ ಇಲ್ಲ. ಸಿದ್ದರಾಮಯ್ಯ ನಂಬಿರುವ ಜ್ಯೋತಿಷಿ ಮನೆ ದೇವರು ಹೇಳಿದ್ದಾರೆ. ಸಿದ್ದರಾಮಯ್ಯ 2 ಕ್ಷೇತ್ರದಲ್ಲೂ ಗೆಲ್ಲುತ್ತಾರೆ. ಬಳಿಕ ಮಗನಿಗೆ ವರುಣಾ ಬಿಟ್ಟುಕೊಟ್ಟು , ಕೋಲಾರ ಉಳಿಸಿಕೊಳ್ಳುತ್ತಾರೆ ಎಂದರು.

ಕೋಲಾರದಲ್ಲಿ ಮುನಿಯಪ್ಪ ಸೇರಿ ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ. ಸಿದ್ಧರಾಮಯ್ಯರನ್ನ ಗೆಲ್ಲಿಸುತ್ತೇವೆ ಎಂದು ಕಾಂಗ್ರೆಸ್ ಶಾಸಕ ಎಸ್ ಎನ್ ನಾರಾಯಣಸ್ವಾಮಿ ತಿಳಿಸಿದರು.

Key words: Siddaramaiah –contest  Varuna – Kolar -MLA -SN Narayanaswamy