ಮೈಸೂರಿನಲ್ಲಿ ಹಕ್ಕಿಜ್ವರ ಮತ್ತು ಕೊರೋನಾ ಭೀತಿ: ದಿಢೀರ್ ಕುಸಿದ ಮೊಟ್ಟೆ ಬೆಲೆ…

ಮೈಸೂರು,ಮಾ,18,2020(www.justkannada.in):  ಮೈಸೂರಿನಲ್ಲಿ  ಹಕ್ಕಿಜ್ವರ ಕಾಣಿಸಿಕೊಂಡಿದ್ದು ಇದರ ಜತೆ ಕೊರೋನಾ ಸೋಂಕಿನ ಭೀತಿ ಆವರಿಸಿದೆ. ಈ ಪರಿಣಾಮ ವ್ಯಾಪಾರ ವಹಿವಾಟಿನ ಮೇಲೆ ಬಿದಿದ್ದು ಮೊಟ್ಟೆ ವ್ಯಾಪಾರದಲ್ಲಿ ಭಾರಿ ಕುಸಿತ ಉಂಟಾಗಿದೆ.

ಹಕ್ಕಿ ಜ್ವರ ಹಾಗೂ ಕೊರೊನಾ ಹಿನ್ನಲೆ ಮೊಟ್ಟೆ ಬೆಲೆ ದಿಢೀರ್ ಕುಸಿತ ಕಂಡಿದೆ.  ಮೈಸೂರಿನ ದೇವರಾಜ ಮಾರುಕಟ್ಟೆಯಲ್ಲಿ ಮೊಟ್ಟೆ ಅಂಗಡಿಗಳು ಖಾಲಿ ಖಾಲಿ ಹೊಡೆಯುತ್ತಿದ್ದು ಗ್ರಾಹಕರಿಲ್ಲದೆ ಮೊಟ್ಟೆ ವ್ಯಾಪಾರಿಗಳು ಕಂಗಾಲಾಗಿದ್ದಾರೆ. ಮೈಸೂರಿನಲ್ಲಿ ಹಕ್ಕಿಜ್ವರ ದೃಢವಾದ ಹಿನ್ನಲೆ. ಕೋಳಿ ಮಾಂಸ, ಮೊಟ್ಟೆ ಮಾರಾಟ ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಇತ್ತ ದೇವರಾಜ ಮಾರುಕಟ್ಟೆ ಸುತ್ತಮುತ್ತ ಮೊಟ್ಟೆ ಅಂಗಡಿಗಳು ಗ್ರಾಹಕರಿಲ್ಲದೇ ಖಾಲಿ ಖಾಲಿಯಾಗಿವೆ. ಹಕ್ಕಿಜ್ವರದಿಂದ ಬೆಚ್ಚಿಬಿದ್ದರುವ  ಮೈಸೂರಿಗರು.ಕೋಳಿ, ಮೊಟ್ಟೆ ಸೇವನೆಗೆ ಬ್ರೇಕ್ ಹಾಕಿದ್ದಾರೆ . ಈ ಹಿನ್ನೆಲೆ 100 ಮೊಟ್ಟೆಗೆ 520 ರೂ ಇದ್ದ ಮೊಟ್ಟೆಬೆಲೆ  ಹಕ್ಕಿಜ್ವರದಿಂದ ದಿಢೀರ್ ಕುಸಿತ ಕಂಡಿದೆ. ಇದೀಗ 100 ಮೊಟ್ಟೆಗೆ 300 ರೂ ಇಳಿಕೆಯಾಗಿದೆ. ಒಂದೇ ದಿನಕ್ಕೆ ಮೊಟ್ಟೆ ಬೆಲೆ 220. ರೂ ಕುಸಿದಿದೆ. ಸದ್ಯ ಮೈಸೂರಿನ ಗ್ರಾಮೀಣಾ ಭಾಗದಿಂದ ತರಿಸಲಾಗುತ್ತಿದ್ದ ಮೊಟ್ಟೆ ಕೂಡಾ ಬಂದ್ ಮಾಡಲಾಗಿದೆ.

Key words: Mysore- birdflue- corona virus-declining- egg- prices.