ಆರ್.ಎಸ್.ಎಸ್.ಮುಖಂಡ ರಾಜು ಕೊಲೆ ಕೇಸ್ ನ ಆರೋಪಿ ಬೈಕ್ ಕಳುವು ಪ್ರಕರಣದಲ್ಲಿ ಅರೆಸ್ಟ್.

Promotion

ಮೈಸೂರು,ಆಗಸ್ಟ್,8,2021(www.justkannada.in): ಆರ್.ಎಸ್.ಎಸ್.ಮುಖಂಡ ರಾಜು ಕೊಲೆ ಪ್ರಕರಣದ ಆರೋಪಿ ಅಬೀದ್ ಪಾಷ ಇದೀಗ ಬೈಕ್ ಕಳುವು ಪ್ರಕರಣದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಮೈಸೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರ್.ಎಸ್.ಎಸ್.ಮುಖಂಡ ರಾಜು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಅಬೀದ್ ಪಾಷನನ್ನ ಬೈಕ್ ಕಳುವು ಪ್ರಕರಣದಲ್ಲಿ ಬಂಧಿಸಿದ್ದಾರೆ. ಯುವಕನೊಬ್ಬನಿಗೆ ಪ್ರೇರೇಪಣೆ ಮಾಡಿ ಬೈಕ್ ಕಳುವು ಮಾಡಿಸಿದ್ದ ಅಬೀಬ್ ಪಾಷ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಅಬ್ದುಲ್ ರಹೀಮ್ (21) ಎಂಬಾತನನ್ನ ಸೆರೆಹಿಡಿದ ಸಿಸಿಬಿ ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ 4 ಲಕ್ಷ ಮೌಲ್ಯದ 6 ದ್ವಿಚಕ್ರ ವಾಹನಗಳು ಕಳುವು ಮಾಡಿದ ಪ್ರಕರಣಗಳು ಪತ್ತೆಯಾಗಿದೆ. ಅಬ್ದುಲ್ ರಹೀಮ್ ಗೆ ದ್ವಿಚಕ್ರ ವಾಹನಗಳನ್ನ ಕಳುವು ಮಾಡಲು ಪ್ರೇರೇಪಣೆ ಮಾಡಿದ ಅಬೀದ್ ಪಾಷ ಸಹ ಆರೋಪಿಯಾಗಿದ್ದು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ರಾಜು ಕೊಲೆ ಪ್ರಕರಣ ಎದುರಿಸಿದ್ದ ಅಬೀದ್ ಪಾಷಾಗೆ ಬೈಕ್ ಕಳುವು ಪ್ರಕರಣ ಮತ್ತೊಂದು ಉರುಳಾಗಿದೆ.

Key words: mysore-bike- thief- murder case –accused-arrest