ಹಾಸನದಲ್ಲಿ ಬಲೆಗೆ ಬಿದ್ದ ಮೈಸೂರಿನ ಚಾಲಾಕಿ ಮನೆಗಳ್ಳರು !

Promotion

ಹಾಸನ, ಮಾರ್ಚ್ 7, 2020 (www.juskannada.in): ಮನೆಯಲ್ಲಿ ಯಾರೂ ಇಲ್ಲದ ಸಮಯವನ್ನು ನೋಡಿಕೊಂಡು ಅಂತಹ ಮನೆಗಳಿಗೆ ಕನ್ನ ಹಾಕಿ ನಗದು, ಚಿನ್ನಾಭರಣ ದೋಚುತ್ತಿದ್ದ ಮೈಸೂರು ಮೂಲದ ಮೂವರು ಮನೆಗಳ್ಳರನ್ನು ಜಿಲ್ಲಾ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಆರೋಪಿಗಳಾ ಮೈಸೂರು ಜಿಲ್ಲೆಯ ಸರಗೂರು ಗ್ರಾಮದ ನಿವಾಸಿ ಫಯಾಜ್ ಅಹಮದ್ ಹಾಗೂ ಮೈಸೂರಿನ ಸಯ್ಯದ್ ನಾಸಿರ್, ಕೇಶವ ಬಾಬು ಗಾಯಕ್ವಾಡ್ ಬಂಧಿತರಾಗಿದ್ದಾರೆ.

ಇವರು ಮಹಾನ್ ಖದೀಮರಾಗಿದ್ದು, ಈಗಾಗಲೇ ಮಂಡ್ಯ, ಕೊಡಗು, ಚಾಮರಾಜನಗರ, ಮೈಸೂರು ಜಿಲ್ಲೆಗಳಲ್ಲಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ವಿಚಾರಣೆ ವೇಳೆ ಬಹಿರಂಗಗೊಂಡಿದೆ.