ಮೈಸೂರಲ್ಲಿ ಹಾಡಹಗಲೇ ಮಹಿಳೆ ಕೊಲೆಗೆ ಯತ್ನ. ಆರೋಪಿ ಸೆರೆ..

Promotion

 

ಮೈಸೂರು, ಜೂ.29, 2019 : (www.justkannada.in news) ನಗರದ ಜಯಲಕ್ಷ್ಮೀಪುರಂ ನಲ್ಲಿರುವ ಗಿಳಿ ಪಾರ್ಕ್ ಬಳಿ ಹಾಡಹಗಲೇ ಮಹಿಳೆ ಕೊಲೆಗೆ ಯತ್ನಿಸಿದ ಘಟನೆ ನಡೆದಿದೆ.

ಮಹಿಳೆ ಒಂಟಿಯಾಗಿದ್ದ ವೇಳೆ ಮನೆಗೆ ನುಗ್ಗಿ ಕೊಲ್ಲಲು ಯತ್ನ. ಸಾರ್ವಜನಿಕರ ನೆರವಿನಿಂದ ಮಹಿಳೆ ಬಚಾವ್. ಅಶ್ವಿನಿ ಎಂಬಾಕೆ ಮೇಲೆ ಹಲ್ಲೆ. ಬ್ಯೂಟಿ ಪಾರ್ಲರ್ ನಡೆಸುತ್ತಿರುವ ಅಶ್ವಿನಿ. ಮಂಡ್ಯದ ಮಂಜು ಎಂಬಾತನಿಂದ ಕೃತ್ಯ. ಆರೋಪಿ ಮಂಜು ಅಶ್ವಿನಿಯ ಪತಿ ಮುರಳಿ ಸ್ನೇಹಿತ ಎನ್ನಲಾಗಿದೆ.

ಮಂಡ್ಯದಲ್ಲಿ ಬೇಕರಿ ನಡೆಸುತ್ತಿರುವ ಆರೋಪಿ ಮಂಜು. ಖಾಸಗಿ ಕಾಲೇಜಿನಲ್ಲಿ ದೈಹಿಕ ಶಿಕ್ಷಕನಾಗಿರುವ ಮುರಳಿ. ಮಂಜುವನ್ನ ಪೊಲೀಸರಿಗೆ ಹಿಡಿದು ಕೊಟ್ಟ ಸಾರ್ವಜನಿಕರು.
ಜಯಲಕ್ಷ್ಮೀಪುರಂ ಪೊಲೀಸರ ವಶಕ್ಕೆ ಆರೋಪಿ ಮಂಜು. ಪತಿ ಮುರಳಿಯನ್ನು ವಿಚಾರಣೆಗೊಳಪಡಿಸಲಿರುವ ಪೊಲೀಸರು.

—-

key words : mysore-Attempted murder- of a woman -in Mysore.