ಅರ್ಜುನ್ ಜನ್ಯ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಅಪೋಲೋ ಆಸ್ಪತ್ರೆ ಮುಖ್ಯಸ್ಥ ಡಾ.ಭರತೀಶ್ ರೆಡ್ಡಿ

Promotion

ಮೈಸೂರು,ಫೆ,27,2020(www.justkannada.in): ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಲಘು ಹೃದಯಾಘಾತಕ್ಕೊಳಗಾಗಿ ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇವರ ಆರೋಗ್ಯದ ಬಗ್ಗೆ ಅಪೋಲೊ ಅಸ್ಪತ್ರೆ ಮುಖ್ಯಸ್ಥ ಡಾ.ಭರತೀಶ್ ರೆಡ್ಡಿ ಮಾಹಿತಿ ನೀಡಿದ್ದಾರೆ.

ಅರ್ಜುನ್ ಜನ್ಯ ಈಗ ಆರೋಗ್ಯವಾಗಿದ್ದಾರೆ. ನಾಳೆ ಡಿಸ್ಚಾರ್ಜ್ ಆಗಬಹುದು.  ಅರ್ಜುನ್ ಜನ್ಯ ಅನಾರೋಗ್ಯಕ್ಕೆ ಜೀವನ ಶೈಲಿಯೂ ಕಾರಣ ಎಂದು ಅಪೋಲೋ ಆಸ್ಪತ್ರೆ ಮೈಸೂರು ಘಟಕದ ಮುಖ್ಯಸ್ಥ ಭರತೀಶ್ ರೆಡ್ಡಿ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು, ಅರ್ಜುನ್ ಜನ್ಯ ಅವರಿಗೆ ಬಹುಬೇಡಿಕೆ ಇದೆ. ಬ್ಯುಸಿಯಿಂದಾಗಿ ಸಹಜವಾಗಿಯೇ ಒತ್ತಡ ಇರುತ್ತಾರೆ.  ಭಾನುವಾರ ಅರ್ಜುನ್ ಜನ್ಯ ಅವರು ಆಸ್ಪತ್ರೆಗೆ ಬಂದಾಗ ಗ್ಯಾಸ್ಟ್ರಿಕ್ ಸಮಸ್ಯೆ ಇತ್ತು.  ವಿಪರೀತ ತಲೆನೋವು, ಬೆನ್ನು ನೋವಿನಿಂದ ಬಳಲುತ್ತಿದ್ದರು‌.  ಹೆಚ್ಚಿನ ಚಿಕಿತ್ಸೆ ಭಾಗವಾಗಿ ಇಸಿಜಿ ಪರೀಕ್ಷೆ ಮಾಡಿಸಿದಾಗ ಹೃದ್ರೋಗ ಇರುವುದು ಗೊತ್ತಾಯಿತು.  ಆಸ್ಪತ್ರೆಯಲ್ಲಿ ಇರುವಾಗಲೇ ಹೃದ್ರೋಗದ ವಿಷಯ ಗೊತ್ತಾಗಿದ್ದರಿಂದ ಚಿಕಿತ್ಸೆಗೆ ಅನುಕೂಲವಾಯ್ತು. ಈಗ ಅರ್ಜುನ್ ಆರೋಗ್ಯವಾಗಿದ್ದಾರೆ. ಭವಿಷ್ಯದಲ್ಲಿ ವೈದ್ಯರ ಸಲಹೆ ಮೇರೆಗೆ ಎಚ್ಚರಿಕೆ ವಹಿಸುವುದು ಉತ್ತಮ ಎಂದು ಸಲಹೆ ನೀಡಿದರು.

Key words: mysore- Arjun Janya – health- Apollo Hospital -Chief -Dr.barthish Reddy