ಸಪ್ಲೇಯರ್ ಮೇಲೆ ನಟ ದರ್ಶನ್ ಹಲ್ಲೆ ಪ್ರಕರಣ: ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ ಹೋಟೆಲ್ ಸಿಬ್ಬಂದಿ ಗಂಗಾಧರ್.

Promotion

ಮೈಸೂರು,ಜುಲೈ,16,2021(www.justkannada.in):  ಮೈಸೂರಿನ ಸಂದೇಶ್ ದಿ ಪ್ರಿನ್ಸ್ ಹೋಟೆಲ್ ಸಪ್ಲೇಯರ್ ಮೇಲೆ ನಟ ದರ್ಶನ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆಗೊಳಗಾಗಿದ್ದಾರೆ ಎನ್ನಲಾದ ಹೋಟೆಲ್ ಸಿಬ್ಬಂದಿ ಗಂಗಾಧರ್  ಘಟನೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.jk

ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಪೊಲೀಸರು ಇಂದು  ಸಂದೇಶ್ ದಿ ಪ್ರಿನ್ಸ್ ಹೋಟೆಲ್ ಗೆ ಭೇಟಿ ನೀಡಿ ಸಿಬ್ಬಂದಿಗ ಹೇಳಿಕೆ ದಾಖಲು ಮಾಡಿಕೊಂಡರು.  ಇದಾದ ಬಳಿಕ ಮಾಧ್ಯಮಗಳ ಜತೆ ಮಾತನಾಡಿ ಸ್ಪಷ್ಟನೆ ನೀಡಿರುವ ಹಲ್ಲೆಗೊಳಗಾಗಿದ್ದಾರೆ ಎನ್ನಲಾದ ಹೋಟೆಲ್ ಸಿಬ್ಬಂದಿ ಗಂಗಾಧರ್, ನಾನು ದಲಿತ ಸಮುದಾಯಕ್ಕೆ ಸೇರಿದವನಲ್ಲ. ನಾನು ನಾಯರ್ ಸಮುದಾಯಕ್ಕೆ ಸೇರಿದವನು. ಅಂದು ದರ್ಶನ್ ಅವರು ನಮ್ಮ ಮೇಲೆ ಸಿಟ್ಟಾಗಿದ್ದು ನಿಜ. ಆದರೆ ನನ್ನ ಮೇಲೆ ಯಾವುದೇ ರೀತಿಯ ದೈಹಿಕ ಹಲ್ಲೆ ಮಾಡಿಲ್ಲ.  ಹಲ್ಲೆಯಾಗಿದ್ದರೆ ನನ್ನ ಮುಖದಲ್ಲಿ ಗಾಯಗಳಿರಬೇಕಿತ್ತು. ಆದರೆ ನೋಡಿ ಯಾವುದೇ ಗಾಯಗಳೂ ಇಲ್ಲ ಎಂದು ಮಾಸ್ಕ್ ತೆಗೆದು ಕ್ಯಾಮರಾಗೆ ಮುಖ ತೋರಿಸಿದರು.

ನನಗೆ ಮದುವೆಯಾಗಿಲ್ಲ ನಾನೂ ಈಗಲೂ ಬ್ಯಾಚ್ಯುಲರ್. ಹಾಗಾಗಿ ನನ್ನ ಹೆಂಡತಿ ಹೋಟೆಲ್ ಬಳಿ ಪೊರಕೆ ಹಿಡಿದು ಬಂದಿದ್ದಳು ಎಂಬುದು ಸುಳ್ಳು. ಬಹುಶಃ ಹೋಟೆಲ್ ಕ್ಲೀನ್ ಮಾಡುವ ಮಹಿಳೆಯನ್ನು ನೋಡಿ ಹಾಗೆ ಭಾವಿಸಿರಬಹುದು. ಹೊಟೆಲ್ ಎದುರು ಕಸ ಗುಡಿಸೋರು ಪೊರಕೆ ತಂದಿರ್ತಾರೆ. ಅದನ್ನ ನೋಡಿ ಪರಕೆ ತಂದಿದ್ದಾರೆ ಎಂದು ಇಂದ್ರಜಿತ್ ಹೇಳಿದ್ದಾರೆ. ಎಂದು ಗಂಗಾಧರ್ ತಿಳಿಸಿದರು.

Key words: mysore-Actor –Darshan- assaulted – supplier-Gangadhar – clear – media.