ಕೊರೋನಮುಕ್ತ ಗ್ರಾಮ ಪಂಚಾಯಿತಿ ನಿರ್ಮಾಣದ ಗುರಿ: ಜನರಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಔಷಧ ವಿತರಣೆ.

ಮೈಸೂರು,ಜುಲೈ,16,2021(www.justkannada.in):  ನಾಗವಾಲ ಪಂಚಾಯಿತಿಯನ್ನು ಕೊರೋನ ಮುಕ್ತ ಗ್ರಾಮ ಪಂಚಾಯಿತಿಯನ್ನಾಗಿಸುವ ಹಾಗೂ ನಿರೀಕ್ಷಿತ  ಕೊರೋನಾ 3 ನೇ ಅಲೆಯ ಪ್ರಖರತೆ ತಗ್ಗಿಸುವ ನಿಟ್ಟಿನಲ್ಲಿ ನಾಗವಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೂರು ದಿನಗಳ ಆರೋಗ್ಯ ಶಿಬಿರ ಆಯೋಜಿಸಲಾಗಿತ್ತು.jk

ಮೈಸೂರು ಜಿಲ್ಲಾಪಂಚಾಯಿತಿ, ನಾಗವಾಲ ಗ್ರಾಮ ಪಂಚಾಯಿತಿ, ಕ್ರೆಡಿಟ್ – ಐ ಸಂಸ್ಥೆ,  ವುರ್ಥ್ ಎಲೆಕ್ಟ್ರಾನಿಕ್ ಇಂಡಿಯಾ ಪ್ರೈ ಲಿಮಿಟೆಡ್,  ಇನ್ನರ್ ವ್ಹೀಲ್ ಕ್ಲಬ್ ಆಫ್ ಮೈಸೂರು ಸೆಂಟ್ರಲ್,  ಮಹಾರಾಣಿ ಮಹಿಳಾ ಕಲಾ ಕಾಲೇಜು ಹಾಗೂ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಸಹಯೋಗದಲ್ಲಿ ನಾಗವಾಲ ಗ್ರಾಮ ಪಂಚಾಯಿತಿಯ ಎಲ್ಲಾ 5 ಗ್ರಾಮಗಳಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ಔಷಧ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ತಪಾಸಣಾ ಶಿಬಿರದ 3ನೇ ದಿನವಾದ ಇಂದು ಬೊಮ್ಮೇನಹಳ್ಳಿ ಗ್ರಾಮದಲ್ಲಿ  ಜನರಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಔಷಧ ವಿತರಣೆ ಮಾಡಲಾಯಿತು. ಗ್ರಾಮದ ಸುಮಾರು 180 ಕ್ಕೂ ಹೆಚ್ಚಿನ ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರು ತಮ್ಮ ಆರೋಗ್ಯ ಪರೀಕ್ಷೆ ಮಾಡಿಸಿಕೊಂಡು ಔಷಧ ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ನಾಗವಾಲ ಗ್ರಾಮ ಪಂಚಾಯಿತಿ ಸದಸ್ಯ ಮಹದೇವ್,  ಕ್ರೆಡಿಟ್ – ಐ ಮ್ಯಾನೇಜಿಂಗ್ ಟ್ರಸ್ಟಿ,  ಡಾ.ಎಂ.ಪಿ.ವರ್ಷ, ಗೋಪಾಲಕೃಷ್ಣ ಶಾಸ್ತ್ರಿ ಹಾಗೂ ಸಂತೋಷ್ ಶೆಟ್ಟಿ, ವುರ್ಥ್ ಎಲೆಕ್ಟ್ರಾನಿಕ್ ಇಂಡಿಯಾ ಪ್ರೈ ಲಿಮಿಟೆಡ್; ಡಾ. ಸಂಧ್ಯಾ ದಿನೇಶ್, ಡಾ. ಅನೂಶ್ರೀ ಎನ್, ಡಾ. ನಿಸರ್ಗ, ಸಂಧ್ಯಾ ರಾಣಿ, ಇನ್ನರ್ ವ್ಹೀಲ್ ಕ್ಲಬ್ ಮೈಸೂರ್ ಸೆಂಟ್ರಲ್; ಡಾ.  ಚಂದ್ರಶೇಖರ್, ಡಾ.  ಶಿವಸುಧನ್ ಹಾಗೂ ತಂಡದವರು, ಸ್ವಾಮಿ ವಿವೇಕಾನಂದ  ಆಸ್ಪತ್ರೆ, ಸರಗೂರು;  ಮೊದಲಾದವರು ಭಾಗವಹಿಸಿದ್ದರು.

Key words: Target –construction- corona- nagavala –grama panchayth- Free -Health Checkup