ಮೈಸೂರು: ನಿಯಂತ್ರಣ ತಪ್ಪಿ ಬೈಕ್ ಅಪಘಾತ: ಬೈಕ್ ಸವಾರ ಸ್ಥಳದಲ್ಲೇ ಸಾವು…

Promotion

ಮೈಸೂರು,ಮೇ,10,2019(www.justkannada.in): ಚಾಲಕನ ನಿಯಂತ್ರಣ ಕಳೆದುಕೊಂಡು ಬೈಕ್ ಅಪಘಾತವಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ಹೆಚ್.ಡಿ ಕೋಟೆ ತಾಲ್ಲೂಕಿನಲ್ಲಿ ನಡೆದಿದೆ.

ಎಚ್.ಡಿ.ಕೋಟೆ ತಾಲೋಕಿನ ಕೋಳಗಾಲ ಬಳಿ ಈ ಘಟನೆ ನಡೆದಿದೆ.  ತೀವ್ರ ಸ್ವರೂಪದಲ್ಲಿ ಗಾಯಗೊಂಡಿದ್ದ ಸುಮಾರು 38 ವರ್ಷದ ಅಪರಿಚಿತ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ

ಗಾಯಾಳು ಎಂದು ಭಾವಿಸಿ  ಸ್ಥಳೀಯರು ಮೃತದೇಹ‌‌ವನ್ನ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಎಚ್.ಡಿ ಕೋಟೆ ಪೊಲೀಸ್  ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Key words: Mysore-accident -occurred – .Bike rider- dies -on the spot.