́ ಟ್ವಿಲೈಟ್ ವಿಸ್ಪರ್ಸ ಆಫ್ ಹಂಪಿ ́  ಛಾಯಾಚಿತ್ರ ಪ್ರದರ್ಶನ @mysore

mysore ̲ photo ̲ exhibition

Promotion

 

ಮೈಸೂರು, ಫೆ.೧೦, ೨೦೨೪ : (justkannada in news )  ಟ್ವಿಲೈಟ್ ವಿಸ್ಪರ್ಸ ಆಫ್ ಹಂಪಿ ಛಾಯಾಚಿತ್ರ ಪ್ರದರ್ಶನವನ್ನು   ಮೈಸೂರಿನ ನೆರಳು ಬೆಳಕು ಗ್ಯಾಲರಿ, ಕಾಫಿ ಸಿಟಿಯಲ್ಲಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ ವಿ ಉದ್ಘಾಟಿಸಿದರು.

ಹಂಪಿ ಮತ್ತು ಮೈಸೂರಿನ ಸಾಂಸ್ಕೃತಿಕ ಸಂಬಂಧ ನೆನೆಯುತ್ತಾ ಶಿವಶಂಕರ್ ಬಣಗಾರ್ ಅವರ ಚಿತ್ರಗಳು ಹಂಪಿಯ ಸ್ಮಾರಕಗಳನ್ನು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯವಾಗಿ ತಲುಪಿಸಲು ಹಾಗೂ ಪ್ರವಾಸಿಗರನ್ನು ಸೆಳೆಯಲು ಯಶಸ್ವಿಯಾಗಿವೆ. ಇದರಿಂದ ಸ್ಥಳೀಯ ಆರ್ಥಿಕ ವಹಿವಾಟಿಗೂ ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಛಾಯಾಗ್ರಾಹಕರನ್ನು ಉತ್ತೇಜಿಸುವ ಮೂಲಕ ಅವರಲ್ಲಿನ ಕ್ರಿಯಾಶೀಲತೆಯನ್ನು ಪ್ರೊತ್ಸಾಹಿಸಿ ಅದರ ಲಾಭವನ್ನು ಸಮಾಜಕ್ಕೆ ಸಲ್ಲಿಸುವಲ್ಲಿ ಆಡಳಿತದ ನೆರವು ಅಗತ್ಯ. ದಸರಾವನ್ನು ಕೂಡ ಈ ನಿಟ್ಟಿನಲ್ಲಿ ಮುಂದೆ ಯೋಚಿಸಲಾಗುವುದು ಎಂದರು.

ಶಿವಶಂಕರ್ ಬಣಗಾರ್ ಅವರು ನನ್ನ ನೆಚ್ಚಿನ ಛಾಯಾಗ್ರಾಹಕರು, ನಾನು ಅವರ ಚಿತ್ರಗಳನ್ನು ನಿರಂತರವಾಗಿ ನೋಡಿ ಆನಂದಿಸಿರುವೆ. ಕಲಾವಿದರ ಚಿತ್ರಗಳನ್ನು ಕೊಳ್ಳುವ ಮೂಲಕ ಸಮಾಜ ಪ್ರೊತ್ಸಾಹಿಸಬೇಕು ಎಂದರು.

ಪ್ರದರ್ಶನದಲ್ಲಿ ಬಣಗಾರ್ ಅವರ ಒಂದು ಚಿತ್ರ ಕೊಳ್ಳುವ ಮೂಲಕ ಪ್ರದರ್ಶನಕ್ಕೆ ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ಬಣಗಾರ್ ಅವರ ಚಿತ್ರಗಳನ್ನೊಳಗೊಂಡ ಕ್ಯಾಲೆಂಡರ್ ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ  ಗೌರೀಶ್ ಕಪನಿ, ಜಿಕೆ ಕುಲಕರ್ಣಿ, ಶರಾಜಶೇಖರ ಜಮದಂಡಿ ಮತ್ತು ಮಧು ಬಳ್ಳಾಕಿ ಉಪಸ್ಥಿತರಿದ್ದರು.

ಟ್ವಿಲೈಟ್ ವಿಸ್ಪರ್ಸ ಆಫ್ ಹಂಪಿ ಛಾಯಾಚಿತ್ರ ಪ್ರದರ್ಶನವು ಇಂದಿನಿಂದ ೨೯ ಫೆಬ್ರುವರಿ ೨೦೨೪, ಬೆಳಗ್ಗೆ ೯ ರಿಂದ ಸಂಜೆ ೯ರವರೆ ಸಾರ್ವಜನಿಕರ ವೀಕ್ಷಣೆಗೆ ತೆರೆದಿರುತ್ತದೆ.

Key words : mysore ̲ photo ̲ exhibition