ನಗರಸಭೆ ಕಮಿಷನರ್ ಹುದ್ದೆ : ಅಧಿಕಾರಿಗಳಿಬ್ಬರ  ಜಟಾಪಟಿ.

mysore ̲ municipal ̲ corporation ̲ commisoner ̲ fight ̲ post

Promotion

 

ಮೈಸೂರು, ಫೆ.೦೯, ೨೦೨೪ : (www̤ justkannada in news )  ಒಂದೇ ಚೇರಿಗೆ ಇಬ್ಬರು ಅಧಿಕಾರಿಗಳ ಕಿತ್ತಾಟ. ಮೈಸೂರಿನ ಹೂಟಗಳ್ಳಿ ನಗರಸಭೆಯಲ್ಲಿ ಘಟನೆ. ಹೂಟಗಳ್ಳಿ ನಗರಸಭೆಯ ಕಮಿಷನರ್ ಹುದ್ದೆಗಾಗಿ ಕಿತ್ತಾಟ.

ಹೂಟಗಳ್ಳಿ ನಗರಸಭೆ ಕಮಿಷನರ್ ಸಂದೀಪ್ ಮತ್ತು ಈ ಹಿಂದೆ ಹೂಟಗಳ್ಳಿ ನಗರಸಭೆ ಕಮಿಷನರ್ ಆಗಿದ್ದ ನರಸಿಂಹಮೂರ್ತಿ ನಡುವೆ ಕಿತ್ತಾಟ. ಒಂದೇ ಹುದ್ದೆಗೆ ಇಬ್ಬರು ಅಧಿಕಾರಿಗಳ ನಡುವೆ ಜಟಾಪಟಿ. ಕೋರ್ಟ್ ಮೆಟ್ಟಿಲೇರಿದ್ದ ಇಬ್ಬರು ಅಧಿಕಾರಿಗಳು.

ನೆನ್ನೆ ಏಕಾಏಕಿ ಹೂಟಗಳ್ಳಿ ನಗರಸಭೆಗೆ ಭೇಟಿ ಆಗಮಿಸಿದ್ದ ನರಸಿಂಹಮೂರ್ತಿ. ಕಮಿಷನರ್ ಕೊಠಡಿಗೆ ಬೀಗ ಹಾಕಿ ವಾಹನ ತೆಗೆದುಕೊಂಡು ಹೋಗಿರುವ ನರಸಿಂಹಮೂರ್ತಿ. ಬೆಳಿಗ್ಗೆ ಎಂದಿನಂತ ಕರ್ತವ್ಯಕ್ಕೆ ಬಂದ ಸಂದೀಪ್ ಗೆ ಶಾಕ್.

ಕಮಿಷನರ್ ಕೊಠಡಿಗೆ ಬೀಗ, ಇತ್ತ ಕೊಠಡಿ ಆಚೆ ಕುಳಿತು ಕರ್ತವ್ಯ ನಿರ್ವಹಿಸುತ್ತಿರುವ ಕಮಿಷನರ್ ಸಂದೀಪ್. ಕಮಿಷನರ್ ಕೊಠಡಿ ಮುಂದೆ ಟೇಬಲ್ ಹಾಕಿ ಕುಳಿತ ಸಂದೀಪ್. ಕೊಠಡಿ ಆಚೆ ಕುಳಿತು ಸಾರ್ವಜನಿಕರ ಸಮಸ್ಯೆ ಆಲಿಸಿದ ಕಮಿಷನರ್ ಸಂದೀಪ್.

ನರಸಿಂಹಮೂರ್ತಿ ವಿರುದ್ಧ ವಿಜಯನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಕೆ. ಪ್ರಸ್ತುತ ನಗರಸಭೆ ಕಮಿಷನರ್ ಸಂದೀಪ್ ರಿಂದ ದೂರು. ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸುತ್ತಿರುವ ವಿಜಯನಗರ ಪೊಲೀಸರು.

ಇಬ್ಬರು ಅಧಿಕಾರಿಗಳ ಕಿತ್ತಾಟದಿಂದ ಹೈರಾಣದ ಜನತೆ.

Key words : mysore ̲ municipal ̲ corporation ̲ commisoner ̲ fight ̲ post