Saturday, August 1, 2026

BDA Apartments

Home Front Page ಮಂಡ್ಯ ಬಂದ್: ಬಿಜೆಪಿ ವಿರುದ್ದ ಗುಡುಗಿದ ಹೆಚ್.ವಿಶ್ವನಾಥ್.

ಮಂಡ್ಯ ಬಂದ್: ಬಿಜೆಪಿ ವಿರುದ್ದ ಗುಡುಗಿದ ಹೆಚ್.ವಿಶ್ವನಾಥ್.

ಮೈಸೂರು,ಫೆಬ್ರವರಿ,9,2024(www.justkannada.in):  ಹನುಮಧ್ವಜ ತೆರವು ವಿವಾದ ಸಂಬಂಧ ಇಂದು ಕರೆ ನೀಡಲಾಗಿರುವ ಮಂಡ್ಯ ಬಂದ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ಬಿಜೆಪಿ ವಿರುದ್ದ ಗುಡುಗಿದ ವಿಧಾನಪರಿಷತ್ ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್, ಬಿಜೆಪಿಗೆ ಸುಳ್ಳೇ ಮನೆದೇವರು. ಅವರು ಗಲಾಟೆ, ಗದ್ದಲ ಸೃಷ್ಟಿಸುವುದರಲ್ಲಿ ನಿಸ್ಸಿಮರು ಎಂದು ವಾಗ್ದಾಳಿ ನಡೆಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್.ವಿಶ್ವನಾಥ್, ಬಿಜೆಪಿಯವರು ಧಾರ್ಮಿಕ ಭಾವನೆಗಳನ್ನು ಮುಂದಿಟ್ಟು ಜನರಿಗೆ ಮಂಕುಬೂದಿ ಎರಚುತ್ತಿದ್ದಾರೆ. ಮಂಡ್ಯದಲ್ಲಿ ಬೆಂಕಿ ಹಚ್ಚಿ, ಆ ಬೆಂಕಿಯಲ್ಲಿ ಮೈ ಕಾಯಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಮಂಡ್ಯದ ಜನರು ಮುಗ್ದರು, ಅವರಲ್ಲಿ ಅಶಾಂತಿ ಮೂಡಿಸಲು  ಬಿಜೆಪಿ ಮುಂದಾಗಿದೆ. ಮಂಡ್ಯದ ಜನರನ್ನು ದೂರಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ನಾಯಕರು ಮಾಂಸ ತಿಂದಿದ್ದನ್ನು ಬಿಜೆಪಿಗರು ಹೋಗಿ ನೋಡಿದ್ರಾ?

ಕಾಂಗ್ರೆಸ್ ನಾಯಕರು ಮಾಂಸ ತಿಂದು ಸುತ್ತೂರಿಗೆ ತೆರಳಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್, ಇದು ಸುಳ್ಳು, ಅವರು ಮಾಂಸ ತಿಂದಿದ್ದನ್ನು ಬಿಜೆಪಿಗರು ಹೋಗಿ ನೋಡಿದ್ರಾ? ಬಿಜೆಪಿಗರಿಗೆ ಈ ರೀತಿ ಸುಳ್ಳು ಹಬ್ಬಿಸೋದು ಬಿಟ್ಟು ಬೇರೇನೂ ಗೊತ್ತಿದೆ. ಸುಳ್ಳನ್ನೇ ನೂರು ಬಾರಿ ಹೇಳಿ ಸತ್ಯ ಎಂದು ಬಿಂಬಿಸುತ್ತಾರೆ. ನಿರುದ್ಯೋಗ, ಬಡತನ, ಇಂತಹ  ವಿಚಾರಗಳು ಬಿಜೆಪಿಗರ ತಲೆಗೆ ಬರುವುದಿಲ್ಲ. ಅದ್ಯಾವುದೂ ಸುಳ್ಳಿನ ವಿಚಾರಗಳನ್ನು ಇಟ್ಟು ಗಲಾಟೆ ಹಬ್ಬಿಸುವ ಕೆಲಸ ಬಿಜೆಪಿಯಾದ್ದಾಗಿದೆ ಎಂದು ಹರಿಹಾಯ್ದರು.

Key words: BJP  – creating -noise –MLC- H. Vishwanath