ಮುಸ್ಲಿಂ ಏರಿಯಾ ಭಾರತದಲ್ಲಿಲ್ಲವೇ..? ಸಾವರ್ಕರ್ ಫೊಟೊ ಹಾಕಬೇಡಿ ಎನ್ನಲು ಇವರು ಯಾರು..? ಗೃಹ ಸಚಿವ ಅರಗ ಜ್ಞಾನೇಂದ್ರ ಆಕ್ರೋಶ.

Promotion

ಶಿವಮೊಗ್ಗ,ಆಗಸ್ಟ್,16,2022(www.justkannada.in): ನಿನ್ನೆ ಶಿವಮೊಗ್ಗದಲ್ಲಿ ನಡೆದ ಗಲಭೆ ಪ್ರಕರಣ ಸಂಬಂಧ ಮುಸ್ಲೀಂ ಏರಿಯಾದಲ್ಲಿ ಸಾವರ್ಕರ್ ಫೋಟೋ ಯಾಕೆ ಹಾಕಬೇಕಿತ್ತು ಎಂದು ಪ್ರಶ್ನಿಸಿದ ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ಧ ಗೃಹ ಸಚಿವ ಅರಗ ಜ್ಞಾನೇಂದ್ರ ಗುಡುಗಿದ್ದಾರೆ.

ಮುಸ್ಲಿಂ ಏರಿಯಾ ಭಾರತದಲ್ಲಿಲ್ಲವೇ..? ಸಾವರ್ಕರ್ ಫೊಟೊ ಹಾಕಬೇಡಿ ಎನ್ನಲು ಇವರು ಯಾರು..? ಎಂದು ಸಿದ್ಧರಾಮಯ್ಯ ವಿರುದ್ಧ ಗೃಹ ಸಚಿವ ಅರಗ ಜ್ಞಾನೇಂದ್ರ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಅರಗ ಜ್ಞಾನೇಂದ್ರ,  ಸಾವರ್ಕರ್‌ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು. ಸಾವರ್ಕರ್ ಫೊಟೊ  ಹಾಕಬೇಡಿ  ಅನ್ನೋದಕ್ಕೆ ಇವರು ಯಾರು..? ಮುಸ್ಲೀಂ ಏರಿಯಾ ಅಂದ್ರೆ ಸರ್ಕಾರದ ವ್ಯಾಪ್ತಿಗೆ ಬರುವುದಿಲ್ಲವೇ..?   ಮುಸ್ಲೀಂ ಏರಿಯಾ ಭಾರತದಲ್ಲಿಲ್ಲವೇ..? ಸಿದ್ಧರಾಮಯ್ಯ ಹೀಗೆ ಮಾತನಾಡಿದ್ರೆ ಪ್ರಚೋದನೆ ಮಾಡುತ್ತಿದ್ದಾರೆ. ಒಂದು ಸಮುದಾಯದ ಒಲೈಕೆಗೆ ಮುಂದಾಗಿದ್ದಾರೆ ಎಂದು ಕಿಡಿಕಾರಿದರು.

Key words: Muslim -area – Savarkar’s –photo-Home Minister -Araga jnanendra