ಮೈಸೂರಿನಲ್ಲಿ ಮಹಿಳೆಯ ಹತ್ಯೆ: ಗಂಡನಿಂದಲೇ ಕೊಲೆಯಾದ ಶಂಕೆ…

Promotion

ಮೈಸೂರು,ಜು,25,2019(www.justkannada.in):  ಕೌಟುಂಬಿಕ ಕಲಹ ಹಿನ್ನೆಲೆ ಮಹಿಳೆಯ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಗಾಯತ್ರಿಪುರಂ ನಲ್ಲಿ ಈ  ಘಟನೆ ನಡೆದಿದೆ. ರೇಷ್ಮಾ (೨೫) ಕೊಲೆಯಾದ ಮಹಿಳೆ. ಗಂಡ ನದೀಮ್ ನಿಂದಲೆ ಮಹಿಳೆ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ.  ನದೀಮ್ ಮತ್ತು ರೇಷ್ಮಾ ದಂಪತಿಗಳಿಗೆ ಮೂರು ಜನ ಮಕ್ಕಳಿದ್ದು ಅದರಲ್ಲಿ ಒಂದುವರೆ ತಿಂಗಳಿನ ನವಜಾತ ಶಿಶುಕೂಡ ಇದೆ. ಕಳೆದ ಮೂರು ದಿನಗಳ ಹಿಂದೆಯಷ್ಟೇ ಗಾಯತ್ರಿ ಪುರಂ ನಲ್ಲಿ ಈ ಕುಟುಂಬ ಮನೆ ಬಾಡಿಗೆ ಪಡೆದಿತ್ತು. ಈ ಹಿಂದೆ ಕ್ಯಾತಮಾರನಹಳ್ಳಿಯಲ್ಲಿ ವಾಸವಿದ್ದರು. ಆದರೆ ದಂಪತಿಗಳ ಜಗಳಕ್ಕೆ ಬೇಸತ್ತು ಮನೆ ಮಾಲೀಕ ಮನೆ ಖಾಲಿ ಮಾಡಿಸಿದ್ದನು.

ನಂತರ ಮೂರು ದಿನಗಳ ಹಿಂದೆ ಗಾಯತ್ರಿಪುರಂ ನಲ್ಲಿ ಮನೆ ಬಾಡಿಗೆ ಪಡಡೆದು ವಾಸವಾಗಿದ್ದರು. ಈ ನಡುವೆ ಪತಿ  ನದೀಮ್ ಮತ್ತು ಪತ್ನಿ ರೇಷ್ಮಾ ನಡುವೆ  ನೆನ್ನೆ ರಾತ್ರಿ ಜಗಳ ನಡೆದಿದೆ. ಇಂದು ಬೆಳೆಗ್ಗೆ ಮಕ್ಕಳು ಶಾಲೆಗೆ ತೆರಳಿದ ಬಳಿಕ ಪತ್ನಿಯನ್ನ  ನದೀಮ್ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಬಳಿಕ ನದೀಮ್ ನಾಪತ್ತೆಯಾಗಿದ್ದು, ಸ್ಥಳಕ್ಕೆ ನಜರಬಾದ್ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಾಗಿದೆ.

Key words: Murder -woman –Mysore- husband