ಧರ್ಮದ ಹೆಸರಿನಲ್ಲಿ ಹತ್ಯೆ ಮಾಡುವುದನ್ನ ಸಹಿಸಲ್ಲ: ರಾಜಸ್ತಾನದಲ್ಲಿ ಟೈಲರ್ ಹತ್ಯೆ ಪ್ರಕರಣಕ್ಕೆ ರಾಹುಲ್ ಗಾಂಧಿ ಖಂಡನೆ.

Promotion

ನವದೆಹಲಿ,ಜೂನ್,29,2022(www.justkannada.in): ಪ್ರವಾದಿ ಮಹಮ್ಮದ್‌ ರ ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದ ಬಿಜೆಪಿ ಮಾಜಿ ವಕ್ತಾರೆ ನೂಪುರ್​ ಶರ್ಮಾ ಪರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಹಾಕಿದ್ದ ವ್ಯಕ್ತಿಯನ್ನ ಇಬ್ಬರು ಕಿಡಿಗೇಡಿಗಳು ಹತ್ಯೆ ಮಾಡಿದ ಘಟನೆಯನ್ನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಖಂಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ರಾಹುಲ್ ಗಾಂಧಿ,  ಧರ್ಮದ ಹೆಸರಿನಲ್ಲಿ ಹತ್ಯೆ ಮಾಡುವುದನ್ನ ಸಹಿಸಲ್ಲ. ದೇಶದಲ್ಲಿ ಆತಂಕ ಸೃಷ್ಠಿಸುವ ಕೆಲಸವಾಗುತ್ತಿದೆ. ದೇಶದ ಶಾಂತಿ ಕದಡಿದವರಿಗೆ ಶಿಕ್ಷೆಯಾಗಬೇಕು. ಒಗ್ಗಟ್ಟಿನಲ್ಲಿ ದ್ವೇಷವನ್ನು ಸೋಲಿಸಬೇಕಿದೆ. ಶಾಂತಿ ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ.

ನಿನ್ನೆ ರಾಜಸ್ಥಾನದ ಉದಯ್ ಪುರದಲ್ಲಿ ಟೈಲರ್ ಕನ್ಹಯ್ಯಲಾಲ್ ಎಂಬುವವರನ್ನ ಇಬ್ಬರು ಕಿಡಿಗೇಡಿಗಳು  ಶಿರಚ್ಚೇದ ಮಾಡಿದ್ದರು.  ಇಬ್ಬರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.

Key words: Murder – name – religion – not –tolerate-congress-Rahul Gandhi