ಶ್ರೀನಿ ಕಥೆಯ ಶಿವಣ್ಣ ನಟನೆಯ ‘ಘೋಸ್ಟ್ʼ ಚಿತ್ರಕ್ಕೆ ಮುಹೂರ್ತ

Promotion

ಬೆಂಗಳೂರು, ಅಕ್ಟೋಬರ್ 13, 2022 (www.justkannada.in): ಹ್ಯಾಟ್ರಿಕ್‌ ಹೀರೋ ಶಿವರಾಜ ಕುಮಾರ್‌ ನಾಯಕನಾಗಿ ನಟಿಸಲಿರುವ ‘ಘೋಸ್ಟ್‌ʼʼ ಚಿತ್ರಕ್ಕೆ ಮುಹೂರ್ತ ನೆರವೇರಿದೆ.

ʻಶ್ರೀನಿವಾಸ ಕಲ್ಯಾಣʼ, ʻಓಲ್ಡ್‌ ಮಾಂಕ್‌ʼ ಸೇರಿದಂತೆ ಜನಪ್ರಿಯ ಚಿತ್ರಗಳನ್ನು ನಿರ್ದೇಶಿಸಿರುವ ಶ್ರೀನಿ, ಈ ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆಯನ್ನು ಬರೆದಿದ್ದಾರೆ.

ಬೆಂಗಳೂರು ಹಾಗೂ ಮೈಸೂರಿನಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಈ ಅದ್ಧೂರಿ ಸೆಟ್‌ಗಳ ನಿರ್ಮಾಣಕ್ಕೆ ಸುಮಾರು ಮೂರು ಕೋಟಿ ರೂ. ವೆಚ್ಚವಾಗಿದೆ ಎನ್ನಲಾಗಿದೆ.

ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಹಾಗೂ ಮಹೇಂದ್ರ ಸಿಂಹ ಛಾಯಾಗ್ರಹಣ ‘ಘೋಸ್ಟ್‌ ‘ ಚಿತ್ರಕ್ಕಿದೆ. ಸತ್ಯಪ್ರಕಾಶ್‌, ಪ್ರಶಾಂತ್‌ ನಾರಾಯಣನ್‌, ದತ್ತಣ್ಣ, ಅಭಿಜಿತ್‌ ಇತರರು ನಟಿಸಿದ್ದಾರೆ.