ತಮಿಳಿನಲ್ಲಿ ‘ಮಫ್ತಿ’: ಭೈರತಿ ರಣಗಲ್ ಪಾತ್ರದಲ್ಲಿ ಸಿಂಬು !

Promotion

ಚೆನ್ನೈ, ಜೂನ್ 17, 2019 (www.justkannada.in): ಹ್ಯಾಟ್ರಿಕ್ ಹೀರೋ ಶಿವಣ್ಣ ಹಾಗೂ ಶ್ರೀಮರಳಿ ನಟಿಸಿದ್ದ ‘ಮಫ್ತಿ’ ಈಗ ತಮಿಳಿನಲ್ಲಿ ರಿಮೇಕ್ ಆಗುತ್ತಿದೆ.

ಈ ಚಿತ್ರದ ಪೂಜಾ ಕಾರ್ಯಕ್ರಮ ಇತ್ತೀಚಿಗಷ್ಟೆ ನೆರವೇರಿದೆ. ‘ಮಫ್ತಿ’ ಚಿತ್ರದ ಭೈರತಿ ರಣಗಲ್ ಪಾತ್ರದಲ್ಲಿ ಶಿವರಾಜ್ ಕುಮಾರ್ ನಟಿಸಿದ್ದರು. ಈ ಪಾತ್ರವನ್ನು ತಮಿಳಿನಲ್ಲಿ ನಟ ಸಿಂಬು ಕಾಣಿಸಿಕೊಳ್ಳುತ್ತಿದ್ದಾರೆ.

ಶ್ರೀ ಮುರಳಿ ಪಾತ್ರದಲ್ಲಿ ಗೌತಮ್ ಕಾರ್ತಿಕ್ ನಟಿಸುತ್ತಿದ್ದಾರೆ. ಸಿಂಬು ಗ್ಯಾಂಗ್ ಸ್ಟರ್ ಹಾಗೂ ಗೌತಮ್ ಪೊಲೀಸ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.