ನಮಗೆ ಪಕ್ಷ, ಕೆಲಸ ಮುಖ್ಯವೇ ಹೊರತು ಅಧಿಕಾರ ಅಲ್ಲ: ಮುಡಾ ಅಧ್ಯಕ್ಷ ರಾಜೀವ್

Promotion

ಮೈಸೂರು, ಜುಲೈ 24, 2021 (www.justkannada.in): ರಾಜ್ಯದಲ್ಲಿ ಸಿಎಂ, ಸಚಿವ ಸಂಪುಟ, ಹಾಗೂ ನಿಗಮ ಮಂಡಳಿಗಳ ಅಧ್ಯಕ್ಷರ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ

ಮೈಸೂರಿನಲ್ಲಿ ಮುಡಾ ಅಧ್ಯಕ್ಷ ರಾಜೀವ್ ಪ್ರತಿಕ್ರಿಯೆ ನೀಡಿದ್ದಾರೆ.

ನಮಗೆ ಕೆಲಸ ಮುಖ್ಯವೇ ಹೊರತು ಅಧಿಕಾರ ಅಲ್ಲ. ನಾವೆಲ್ಲ ಬಿಜೆಪಿಯವರು, ನಮಗೆ ಬಿಜೆಪಿಯವರು ಸ್ಥಾನ ಕೊಟ್ಟಿದ್ದಾರೆ. ಮತ್ತಷ್ಟು ಜನಕ್ಕೆ ಅಧಿಕಾರ ಕೊಡಬೇಕು ಎಂಬುದು ಪಕ್ಷದ ನಿರ್ಣಾಯ ಎಂದು ಪ್ರತಿಕ್ರಿಯಿಸಿದ್ದಾರೆ.

ನಾವು ಪಕ್ಷದ ಜೊತೆ ಹೋಗ್ತಿವಿ. ನಮಗೆ ಯಾವುದೇ ಭಯ ಇಲ್ಲ. ಕೆಲಸ ಮಾಡುವ ಹುಮ್ಮಸ್ಸು ಇದೆ, ಅದನ್ನ ಮುಂದುವರೆಸುತ್ತೆವೆ. ನಿಗಮ ಮಂಡಳಿಗಳ ಅಧ್ಯಕ್ಷರು ಬದಲಾವಣೆಯಾದರೆ ಮುಂದೆ ನೇಮಕವಾಗುವವರಿಗೆ ನಮ್ಮ ಸಂಪೂರ್ಣ ಬೆಂಬಲ ಇರುತ್ತೆ ಎಂದಿದ್ದಾರೆ.

ನಾವು ಜಾರಿಗೆ ತಂದಿರು ಉತ್ತಮ ಕಾರ್ಯಗಳನ್ನು ಮುಂದುವರೆಸುವಂತೆ ಮನವಿ ಮಾಡ್ತಿವಿ. ಭಾಜಪದ ನಿರ್ಧಾರಕ್ಕೆ ನಿಗಮ ಮಂಡಳಿಯ ಅಧ್ಯಕ್ಷರು ಬದ್ದರಾಗಿರುತ್ತಾರೆ ಎಂದು ಮೈಸೂರಿನ ಮೂಡಾ ಅಧ್ಯಕ್ಷ ರಾಜೀವ್ ಹೇಳಿದ್ದಾರೆ.