ಸಚಿವ ಎಂ.ಬಿ ಪಾಟೀಲ್ ಗೆ ನೇರ ಎಚ್ಚರಿಕೆ ನೀಡಿದ  ಸಂಸದ ಡಿ.ಕೆ ಸುರೇಶ್

Promotion

ಬೆಂಗಳೂರು,ಮೇ,23,2023(www.justkannada.in):  ಐದು ವರ್ಷವೂ ಸಿದ‍್ಧರಾಮಯ್ಯ ಸಿಎಂ ಎಂಬ ಹೇಳಿಕೆ ವಿಚಾರ ಕುರಿತು ಸಚಿವ ಎಂ.ಬಿ ಪಾಟೀಲ್ ಗೆ ಸಂಸದ ಡಿ.ಕೆ ಸುರೇಶ್ ನೇರ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ ಸುರೇಶ್, ​ ಎಂ.ಬಿ.ಪಾಟೀಲ್​ ಹೇಳಿಕೆಗೆ ತೀಕ್ಷ್ಣವಾಗಿ ಉತ್ತರ  ಕೊಡಬಲ್ಲೆ, ಎಚ್ಚರಿಕೆ ಕೊಡಬಲ್ಲೆ.  ಆದರೆ ಈಗಲೇ ಅದೆಲ್ಲ ಬೇಡ. ಎಂ.ಬಿ.ಪಾಟೀಲ್​ಗೆ ಹೇಳಿ, ಇದೆಲ್ಲ ಬೇಡ ಅಂತಾ. ಎಂ.ಬಿ.ಪಾಟೀಲ್ ​ಗೆ ಹೆಚ್ಚಿನ ಮಾಹಿತಿ ಬೇಕು ಅಂದ್ರೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಬಳಿ ಮಾತನಾಡಲಿ ಎಂದು ಕಿಡಿಕಾರಿದರು.

Key words: MP -DK Suresh – direct warning -Minister -MB Patil