ಸಿದ್ಧರಾಮಯ್ಯ 5 ವರ್ಷ ಸಿಎಂ ಎಂಬ ಹೇಳಿಕೆ ವಿಚಾರ: ಕಾಂಗ್ರೆಸ್ ಗೆ ಟಾಂಗ್ ಕೊಟ್ಟ ಬಿಜೆಪಿ .

ಬೆಂಗಳೂರು,ಮೇ,23,2023(www.justkannada.in): ಐದು ವರ್ಷವೂ ಸಿದ್ದರಾಮಯ್ಯ ಸಿಎಂ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿಕೆ  ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ  ಟ್ವೀಟ್ ಮೂಲಕ ಕಾಂಗ್ರೆಸ್ ​ಗೆ ಟಾಂಗ್ ನೀಡಿದೆ.

ಈ ಕುರಿತು ಟ್ವಿಟ್ ಮಾಡಿರುವ ರಾಜ್ಯ ಬಿಜೆಪಿ,  ಡಿ.ಕೆ.ಶಿವಕುಮಾರ್ ಸಿಎಂ ಆಗಲು ಸಿದ್ದರಾಮಯ್ಯ ಬಿಡುವುದಿಲ್ಲ. ಎಂ.ಬಿ.ಪಾಟೀಲ್ ಈ ಹೇಳಿಕೆ ಮೂಲಕ ಎಚ್ಚರಿಕೆ ರವಾನಿಸಿದ್ದಾರೆ ಅಷ್ಟೇ. ಬಹುಮತ ದೊರಕಿದ ನಂತರದ ಎಲ್ಲ ಬೆಳವಣಿಗೆ ಗಮನಿಸಿದಾಗ ಈ ಸರ್ಕಾರ ಸುಸ್ಥಿರವಾಗಿರಲಿದೆ ಎಂಬ ಯಾವ ಲಕ್ಷಣವೂ ಕಾಣುತ್ತಿಲ್ಲ. ಹೈಕಮಾಂಡ್ ​ಗೆ ಕಪ್ಪ ಪೂರೈಸಬೇಕಾದ ಮಾನದಂಡದಲ್ಲಿ ಈ ಸರ್ಕಾರ ರಚನೆಯಾಗಿದೆ ಎಂದು ಟೀಕಿಸಿದೆ.

ಸಿದ್ಧರಾಮಯ್ಯ 5 ವರ್ಷವೂ ಸಿಎಂ  ಆಗಿರುತ್ತಾರೆ ಎಂದು ವರಿಷ್ಠರು ಹೇಳಿದ್ದನ್ನೇ ನಾನು ಹೇಳಿದ್ದೇನೆ.  ವೇಣುಗೋಪಾಲ್ ಏನು ಹೇಳಿದ್ದಾರೋ ಅದನ್ನೇ ನಾನು ಹೇಳಿದ್ದೆ . ಅಧಿಕಾರ ಹಂಚಿಕೆ ಸೂತ್ರದ ಬಗ್ಗೆ ನನಗೆ ಗೊತ್ತಿಲ್ಲ ಎಂದು ಬೆಳಿಗ್ಗೆ ಸಚಿವ ಎಂಬಿ ಪಾಟೀಲ್ ಸ್ಪಷ್ಟನೆ ನೀಡಿದ್ದರು.

Key words: Siddaramaiah- statement – CM – 5 years- BJP –tong- Congress