7 ವರ್ಷದ ಮಗನ ಕೊಂದು ಆತ್ಮಹತ್ಯೆಗೆ ಶರಣಾದ ತಾಯಿ

Promotion

ಚಿಕ್ಕಬಳ್ಳಾಪುರ,ಆಗಸ್ಟ್, 18, 2020(www.justkannada.in):  ಸಂಪಿನಲ್ಲಿ ಮಗನ ಮುಳುಗಿಸಿ ಕೊಂದು ತಾಯಿ ಕೂಡ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಕೊತ್ತಪಲ್ಲಿ ಗ್ರಾಮದಲ್ಲಿ ನಡೆದಿದೆ. jk-logo-justkannada-logo

ಗ್ರಾಮದ ಶೋಭಾ ತನ್ನ 07 ವರ್ಷದ ಮಗ ವಿಶಾಲ್ ನನ್ನು ಕೊಂದು ನಂತರ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮನೆಯ ಮುಂಭಾಗದ ಸಂಪಿನಲ್ಲಿ ಮಗನನ್ನು ಮುಳುಗಿಸಿ ಕೊಲೆ ಮಾಡಿರುವುದು ತಿಳಿದು ಬಂದಿದೆ. ನಂತರ ಮನೆಗೆಯೊಳಗೆ ರೂಮಿನಲ್ಲಿ ಶೋಭಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮನನೊಂದು ಆತ್ಮಹತ್ಯೆಗೆ ಶರಣು : ಮಗ ವಿಶಾಲ್ ಮಾನಸಿಕ ಅಸ್ವಸ್ಥ ವಿಶೇಷ ಚೇತನಾಗಿದ್ದು, ನಡೆದಾಡಲು ಆಗುತ್ತಿರಲಿಲ್ಲ. ಈ ಕುರಿತು ಅನೇಕ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದರೂ ಪ್ರಯೋಜನವಾಗಿಲ್ಲವೆಂದು ಮನನೊಂದು ಈ ಕೃತ್ಯ ನಡೆಸಿದ್ದಾಳೆ ಎನ್ನಲಾಗಿದೆ. mother-killed-7-year-old-son-committed-suicide

ಮನೆಗೆ ಪತಿ ಬಂದು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಕುರಿತು ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

key words: mother – killed – 7-year-old son -committed suicide.