ಮೈಸೂರು ದೇವರಾಜ ಮಾರುಕಟ್ಟೆಯ ಹೂವಿನ ವ್ಯಾಪಾರ ವಹಿವಾಟು ಜೆ.ಕೆ.ಮೈದಾನಕ್ಕೆ ಶಿಫ್ಟ್

ಮೈಸೂರು,ಆ,18,2020(www.justkannada.in): ಗೌರಿ ಗಣೇಶ ಹಬ್ಬ ಹಿನ್ನೆಲೆ ಮೈಸೂರು ದೇವರಾಜ ಮಾರುಕಟ್ಟೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಲಗ್ಗೆಯಿಡುವ ಸಾಧ್ಯತೆ ಇದ್ದು ಈ ಹಿನ್ನೆಲೆ ಇಲ್ಲಿನ ಹೂವಿನ ಮಾರುಕಟ್ಟೆಯನ್ನ ಜೆ.ಕೆ ಮೈದಾನಕ್ಕೆ ಶಿಫ್ಟ್ ಮಾಡಲಾಗಿದೆ.jk-logo-justkannada-logo

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿದ್ದು  ಹೀಗಾಗಿ ಕೊರೊನಾ ನಿಯಂತ್ರಣ ಹಿನ್ನೆಲೆಯಲ್ಲಿ ಹೂ ಮಾರುಕಟ್ಟೆಯನ್ನು ಮೈಸೂರು ಮಹಾನಗರ ಪಾಲಿಕೆ ಸ್ಥಳಾಂತರ ಮಾಡಿದೆ. ಗೌರಿ ಗಣೇಶ ಹಬ್ಬಕ್ಕೆ ಖರೀದಿಗೆ ತೊಡಗುವ ಸಾರ್ವಜನಿಕರ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.mysore-devaraja-market-flower-business-transfer-jk-ground

ನಾಳೆಯಿಂದ ನಾಲ್ಕು ದಿನಗಳವರೆಗೆ ಹೂ ಮಾರಾಟಕ್ಕೆ ಜೆ.ಕೆ.ಮೈದಾನದಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಇನ್ನು ನಾಳೆ ಮಾರುಕಟ್ಟೆ ಸ್ಥಳಾಂತರ ಹಿನ್ನೆಲೆ ಹೂ ಮಾರಾಟಕ್ಕಾಗಿ ಮಾರಾಟಗಾರರು ಇಂದೇ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕೊರೋನಾ ಭೀತಿಯ ನಡುವೆಯೂ ಉತ್ತಮ ವ್ಯಾಪಾರದ ನಿರೀಕ್ಷೆಯಲ್ಲಿರುವ ಹೂ ಮಾರಾಟಗಾರರು ಜೆ.ಕೆ ಮೈದಾನದಲ್ಲಿ ಪ್ಲಾಸ್ಟಿಕ್ ಹೊದಿಕೆಯನ್ನು ಹಾಸಿ ಇಂದೇ ಸ್ಥಳ ನಿಗದಿ ಮಾಡಿಕೊಳ್ಳುತ್ತಿದ್ದಾರೆ.

Key words: Mysore -Devaraja Market -Flower -Business -Transfer – JK ground