ಕೇಂದ್ರ, ರಾಜ್ಯ ಸರ್ಕಾರಿ ಇಲಾಖೆಗಳು, ಪಿಎಸ್‌ ಯುಗಳಲ್ಲಿ 60 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ : ಆಯೋಗ

ನವದೆಹಲಿ, ನವೆಂಬರ್,8, 2022(www.justkannada.in): ಜಸ್ಟೀಸ್ ಹೆಚ್. ಎನ್. ನಾಗಮೋಹನ್ ದಾಸ್ ಆಯೋಗವು, ಸರ್ಕಾರಗಳಿಂದ ದೇಶದಲ್ಲಿ ನಡೆದಿರುವಂತಹ ಬಂಡವಾಳ ಹಿಂತೆಗೆತ, ಗುತ್ತಿಗೆ ಹಾಗೂ ಹೊರಗುತ್ತಿಗೆ ಕಾರ್ಮಿಕ ಪದ್ಧತಿ ಹಾಗೂ ಬ್ಯಾಕ್‌ ಲಾಗ್ ಹುದ್ದೆಗಳು ತುಂಬದೇ ಇರುವಿಕೆಯಂತಹ ವಿವಿಧ ಕ್ರಮಗಳಿಂದಾಗಿ ಎಸ್/ಎಸ್‌ಟಿ ಸಮುದಾಯಗಳ ಮೇಲೆ ತೀವ್ರ ಗಧಾಪ್ರಹಾರ ನಡೆದಂತಾಗಿದ್ದು, ಇದರಿಂದಾಗಿ ಸಾಮಾಜಿಕ ನ್ಯಾಯವೇ ಅಸಂಬದ್ಧವಾಗಿರುವಂತಿದೆ ಎಂದು ಹೇಳಿದೆ.

ಕೇಂದ್ರ ಸರ್ಕಾರ, ಸಾರ್ವಜನಿಕ ವಲಯದ ಅಂಡರ್‌ ಟೇಕಿಂಗ್‌ಗಳು (ಪಿಎಸ್‌ ಯುಗಳು) ಹಾಗೂ ದೇಶದ ಎಲ್ಲಾ ರಾಜ್ಯ ಸರ್ಕಾರಗಳಲ್ಲಿ ಸೇರಿದಂತೆ ಒಟ್ಟು 60 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ಹುದ್ದೆಗಳು ಖಾಲಿ ಇವೆ. ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ೩೦.೭೫ ಲಕ್ಷ ಹುದ್ದೆಗಳು ಖಾಲಿ ಇದ್ದರೆ, ಕರ್ನಾಟಕ ಒಂದರಲ್ಲೇ ೨.೩೯ ಲಕ್ಷ ಹುದ್ದೆಗಳು ಖಾಲಿ ಇವೆ,” ಎಂದು ಆಯೋಗ ತನ್ನ ವರದಿಯಲ್ಲಿ ತಿಳಿಸಿದೆ. ಇದರಿಂದಾಗಿಯೇ ಎಸ್‌.ಸಿ/ಎಸ್‌.ಟಿ ಮೀಸಲಾತಿ ಹೆಚ್ಚಳವಾಗಿದೆ.

ಈ ಎಲ್ಲಾ ಹುದ್ದೆಗಳನ್ನೂ ಸಹ ತುಂಬಿದರೆ, ಎಸ್‌ಸಿ/ಎಸ್‌ಟಿ ಸಮುದಾಯದವರಿಗೆ ಒಟ್ಟು ೧೫ ಲಕ್ಷ ಉದ್ಯೋಗಗಳು ಲಭಿಸುತ್ತವೆ. “ಎಸ್‌ಸಿ/ಎಸ್‌ಟಿ ಸಮುದಾಯಗಳು ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ.೨೫ರಷ್ಟಿದ್ದಾರೆ,” ಎಂದು ಆಯೋಗ ತಿಳಿಸಿದೆ.

ಕೃಷಿ ವಲಯ ದೇಶದ ಆರ್ಥಿಕತೆಯಲ್ಲಿ ಅತೀ ಹೆಚ್ಚಿನ ಉದ್ಯೋಗಗಳ ಪಾಲನ್ನು ಹೊಂದಿದೆ. ಈ ವಲಯವು ದೇಶದ ಒಟ್ಟು ಉದ್ಯೋಗ ಮಾರುಕಟ್ಟೆಯ ಶೇ.೫೩ರಷ್ಟು ಪಾಲನ್ನು ಹೊಂದಿದೆ. ತಯಾರಿಕೆ ಹಾಗೂ ನಿರ್ಮಾಣ ಕ್ಷೇತ್ರಗಳು ನಂತರದ ಸ್ಥಾನದಲ್ಲಿದ್ದು ಶೇ.೧೧ ಪಾಲು ಉದ್ಯೋಗಗಳನ್ನು ಹೊಂದಿದ್ದರೆ, ವ್ಯಾಪಾರ, ಸಾರಿಗೆ, ಆತಿಥ್ಯ ಹಾಗೂ ಶಿಕ್ಷಣದಂತಹ ಇತರೆ ಸೇವಾ ಕ್ಷೇತ್ರಗಳು ಕ್ರಮವಾಗಿ ಶೇ.೯, ಶೇ.೪, ಶೇ.೩ ಹಾಗೂ ಶೇ.೨ರಷ್ಟು ಪಾಲನ್ನು ಹೊಂದಿವೆ ಹಾಗೂ ಉಳಿದ ಕ್ಷೇತ್ರಗಳು ಜೊತೆಯಾಗಿ ಶೇ.೫ರಷ್ಟು ಪಾಲನ್ನು ಹೊಂದಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

“ಸರ್ಕಾರ ಹಾಗೂ ಸಾರ್ವಜನಿಕ ವಲಯಗಳ ಉದ್ಯೋಗಗಳು ಪಾಲು ದೇಶದಾದ್ಯಂತ ಕೇವಲ ಶೇ.೨ ರಷ್ಟಿದೆ. ಹಾಗಾಗಿ, ಎಸ್‌ಸಿ/ಎಸ್‌ ಟಿ ವರ್ಗಗಳಿಗೆ ಲಭ್ಯವಿರುವ ಉದ್ಯೋಗಾವಕಾಶಗಳು ಬಹಳ ಅಲ್ಪ,” ಎಂದು ವರದಿ ತಿಳಿಸಿದೆ. ಮುಂದುವರೆದು, ಸರ್ಕಾರಿ ವಲಯದಲ್ಲಿ ಉದ್ಯೋಗಗಳ ಪಾಲು ಶೇ.೨ರಷ್ಟು ಮಾತ್ರ ಇದೆ. ಮಾನ್ಯ ಸರ್ವೋಚ್ಛ ನ್ಯಾಯಾಲಯವು ಮೀಸಲಾತಿಯ ಮೇಲೆ ಶೇ.೫೦ರಷ್ಟು ಮಿತಿಯನ್ನು ನಿಗಧಿಗೊಳಿಸಿದ್ದು, ಈ ಪ್ರಕಾರವಾಗಿ ಎಸ್‌ಸಿ, ಎಸ್‌ಟಿ ಹಾಗೂ ಓಬಿಸಿಗಳಿಗೆ ಲಭ್ಯವಾಗುವ ಉದ್ಯೋಗಾವಕಾಶಗಳ ಪ್ರಮಾಣ ಶೇ.೧ರಷ್ಟಿದೆ.”

“ಈ ಹಿನ್ನೆಲೆಯಲ್ಲಿ, ಎಸ್‌.ಸಿ ಮತ್ತು ಎಸ್‌.ಟಿ ಸಮುದಾಯದವರಿಗೆ ಸರ್ಕಾರಿ ವಲಯದಲ್ಲಿ ಉದ್ಯೋಗಗಳನ್ನು ಪಡೆಯುವ ಅವರ ನ್ಯಾಯಬದ್ಧ ಹಕ್ಕನ್ನು ಪಡೆಯುವಲ್ಲಿ ಅವರಿಗೆ ಬಹಳ ಕಷ್ಟವಾಗಿದೆ. ಜೊತೆಗೆ, ಸರ್ಕಾರಗಳಿಂದ ಬಂಡವಾಳ ಹಿಂತೆಗೆತ, ಗುತ್ತಿಗೆ ಹಾಗೂ ಹೊರಗುತ್ತಿಗೆ ಆಧಾರಿತ ಕಾರ್ಮಿಕ ವ್ಯವಸ್ಥೆಗಳ ಅಳವಡಿಕೆಯಿಂದಾಗಿ ಹಾಗೂ ಬ್ಯಾಕ್‌ ಲಾಗ್ ಹುದ್ದೆಗಳನ್ನು ತುಂಬದೇ ಇರುವ ಕಾರಣಗಳಿಂದಾಗಿ ಈ ಸಮುದಾಯದವರು ಉದ್ಯೋಗ ಮೀಸಲಾತಿಯಿಂದ ವಂಚಿತರಾಗಿದ್ದಾರೆ,” ಎಂದು ವರದಿಯಲ್ಲಿ ತಿಳಿಸಲಾಗಿದೆ.

ವರದಿಯ ಪ್ರಕಾರ, ೧೯೯೧ರಲ್ಲಿ ಉದಾರೀಕರಣಗೊಳಿಸಿದ ಆರ್ಥಿಕತೆಯನ್ನು ಪರಿಚಯಿಸಲಾಯಿತು. ಇದರಿಂದಾಗಿ ಭಂಡವಾಳ ಹಿಂತೆಗೆತ ಕಾರ್ಯಕ್ರಮದಡಿ ಸಾರ್ವಜನಿಕ ವಲಯದ ವ್ಯಾಪ್ತಿಯನ್ನು ಕಡಿಮೆಗೊಳಿಸುವುದು ಕೇಂದ್ರ ಸರ್ಕಾರದ ನೀತಿಯಾಗಿ ರೂಪುಗೊಂಡಿದೆ.

“ಅನೇಕ ಸಾರ್ವಜನಿಕ ವಲಯಗಳನ್ನು ಖಾಸಗಿ ಸಂಸ್ಥೆಗಳಿಗೆ ಮಾರಾಟ ಮಾಡುವುದು ಹೊಸ ಪದ್ಧತಿಯಾಗಿ ರೂಪುಗೊಂಡಿದೆ. ಇತ್ತೀಚಿನ ವರ್ಷಗಳಲ್ಲಿ ಇದು ಬಹಳ ದೊಡ್ಡ ಪ್ರಮಾಣವನ್ನು ಪಡೆದುಕೊಂಡಿತು. ಕೇಂದ್ರ ಸರ್ಕಾರವು ತನ್ನ ೨೦೨೦-೨೧ರ ಆಯವ್ಯಯದಲ್ಲಿ ಪಿಎಸ್‌ ಯುಗಳಿಂದ ರೂ.೨.೧೧ ಲಕ್ಷ ಕೋಟಿಗಳನ್ನು ಹಿಂತೆಗೆದುಕೊಳ್ಳಲು ಪ್ರಸ್ತಾಪಿಸಿರುವುದನ್ನು ಇಲ್ಲಿ ಗಮನಿಸಬೇಕು,” ಎನ್ನುತ್ತದೆ ವರದಿ.

ಆಯೋಗದ ೨೦೧೮ರ ದತ್ತಾಂಶದ ಪ್ರಕಾರ, ಒಟ್ಟು 30.75 ಲಕ್ಷ ಹುದ್ದೆಗಳು ಖಾಲಿ ಇವೆ:

ಕೇಂದ್ರ ಸರ್ಕಾರ, ರೈಲ್ವೆ, ಮಂಡಳಿಗಳು ಹಾಗೂ ಬ್ಯಾಂಕುಗಳು – ೭,೨೧,೬೬೫

ಉನ್ನತ ಶಿಕ್ಷಣ – ೧,೬೦,೬೮೮

ಪ್ರಾಥಮಿಕ/ ಮಾಧ್ಯಮಿಕ ಶಿಕ್ಷಣ – ೧೦,೦೮,೦೦೫

ಆರೋಗ್ಯ – ೪,೪೫,೬೭೫

ಪೋಲಿಸ್ ಹಾಗೂ ರಕ್ಷಣಾ ಇಲಾಖೆ – ೧,೯೫,೯೩೯

ರಾಜ್ಯ ಪೋಲಿಸ್ ಪಡೆಗಳು – ೫,೩೮,೨೩೭

ನ್ಯಾಯಾಂಗ – ೫,೫೨೫

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: More than- 60 lakh -posts – vacant – central-state government- departments