Sunday, September 20, 2026

BDA Apartments

ಮೋದಿ ಭೇಟಿ: ಮೈಸೂರು- ಬೆಂಗಳೂರು ಹೆದ್ದಾರಿ, ನಾಳೆ ವಾಹನ ಸಂಚಾರ ಬ್ಯಾನ್..! BDA JK_Adv BDA Adv
Home Front Page ಮೋದಿ ಭೇಟಿ: ಮೈಸೂರು- ಬೆಂಗಳೂರು ಹೆದ್ದಾರಿ, ನಾಳೆ ವಾಹನ ಸಂಚಾರ ಬ್ಯಾನ್..!

ಮೋದಿ ಭೇಟಿ: ಮೈಸೂರು- ಬೆಂಗಳೂರು ಹೆದ್ದಾರಿ, ನಾಳೆ ವಾಹನ ಸಂಚಾರ ಬ್ಯಾನ್..!

ಮೈಸೂರು,ಮಾರ್ಚ್, 11,2023(www.justkannada.in): ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು  ಮಂಡ್ಯ ಜಿಲ್ಲೆಯ ಗೆಜ್ಜಲಗೆರೆ ಕಾಲೋನಿ ಬಳಿ ಬೆಂಗಳೂರು – ಮೈಸೂರು ರಾಷ್ಟ್ರೀಯ ದಶಪಥ ರಸ್ತೆ ಉದ್ಘಾಟನೆ ಕಾರ್ಯಕ್ರಮಕ್ಕೆ  ನಾಳೆ ಆಗಮಿಸುತ್ತಿದ್ದಾರೆ.

ಈ ಹಿನ್ನಲೆಯಲ್ಲಿ ಮಾರ್ಚ್ 12 ರ ಬೆಳಿಗ್ಗೆ 7 ಗಂಟೆಯಿಂದ ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಯಾವುದೇ ವಾಹನ ಸಂಚಾರಕ್ಕೆ ಅವಕಾಶವಿರುವುದಿಲ್ಲ. ಅಗತ್ಯಸೇವೆ ಮತ್ತು ಹಾಲಿನ ವಾಹನಗಳಿಗೆ ಮಾತ್ರ ಬೆಳಿಗ್ಗೆ 9 ಗಂಟೆಯವರೆಗೆ ಸರ್ವೀಸ್ ರಸ್ತೆಯಲ್ಲಿ ತೆರಳಲು ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆ ಕಾಲೋನಿಯ ಬಳಿ ನಡೆಯುವ ಪ್ರದಾನ ಮಂತ್ರಿಗಳ ಕಾರ್ಯಕ್ರಮದಲ್ಲಿ ಭಾಗವಹಿಸಲು ಬರುವ ವಾಹನಗಳಿಗೆ ಈ ಕೆಳಕಂಡಂತೆ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಮಳವಳ್ಳಿ ಕಡೆಯಿಂದ ಬರುವ ವಾಹನಗಳು ಕೆ.ಎಂ.ದೊಡ್ಡಿ-ಹುಣ್ಣನದೊಡ್ಡಿ, ಬೋರಾಪರ ಗೇಟ್ ಮಾರ್ಗವಾಗಿ ಮದ್ದೂರಿಗೆ 4 ಕಿಲೋ ಮೀಟರ್ ಹಿಂದಕ್ಕೆ ಎಡಗಡೆ ಕುದುರುಗುಂಡಿ ಕಾಲೋನಿಗೆ ಹೋಗುವ ಮಾರ್ಗದಲ್ಲಿ ಹೋಗಿ ಪಾರ್ಕಿಂಗ್ ಸ್ಥಳಕ್ಕೆ ತೆರಳುವುದು.

ಮದ್ದೂರು ಮತ್ತು ಸುತ್ತಮುತ್ತಲ ಕಡೆಯಿಂದ ತೆರಳುವ ವಾಹನಗಳು, ಮದ್ದೂರು- ಐ.ಬಿ.ವೃತ್ತ- ಮಳವಳ್ಳಿ ರಸ್ತೆಯಿಂದ ಸುಮಾರು 4 ಕಿ.ಮೀ ಮುಂದಕ್ಕೆ ಹೋಗಿ ಬಲಗಡೆಗೆ ಕುದುರುಗುಂಡಿ ಕಾಲೋನಿಗೆ ಹೋಗುವ ಮಾರ್ಗದಲ್ಲಿ  ಹೋಗಿ ಪಾರ್ಕಿಂಗ್ ಸ್ಥಳಕ್ಕೆ ತೆರಳುವುದು.

ಗೆಜ್ಜಲಗೆರೆ ಸುತ್ತಮುತ್ತಲ ಗ್ರಾಮಗಳಿಂದ ತೆರಳುವವರು ಗೆಜ್ಜಲಗೆರೆ ಅಂಡರ್‍ ಪಾಸ್‍ ನಿಂದ ಕುದುರುಗುಂಡಿ ಗ್ರಾಮ, ಸಾದೋಳಲು ಕುದುರುಗುಂಡಿ ಕಾಲೋನಿ ಮಾರ್ಗವಾಗಿ ಪಾರ್ಕಿಂಗ್ ಜಾಗಕ್ಕೆ ತೆರಳುವುದು

ಮಂಡ್ಯ ಕಡೆಯಿಂದ ಬರುವ ವಾಹನಗಳು ಹನಕೆರೆ ಸರ್ವೀಸ್ ರೋಡ್‍ ನಿಂದ ಗೆಜ್ಜಲಗೆರೆ ಗ್ರಾಮದ ಬಳಿಬಂದು ಗೆಜ್ಜಲಗೆರೆ ಅಂಡರ್‍ ಪಾಸ್‍ ನಿಂದ ಕುದುರುಗುಂಡಿ ಗ್ರಾಮ,  ಸಾದೋಳಲು ಕುದುರುಗುಂಡಿ ಕಾಲೋನಿ   ಮಾರ್ಗವಾಗಿ ಪಾರ್ಕಿಂಗ್ ಜಾಗಕ್ಕೆ ತೆರಳುವುದು

ಸಾರ್ವಜನಿಕರು ಸಹಕರಿಸಬೇಕೆಂದು ಮಂಡ್ಯ ಜಿಲ್ಲೆಯ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Key words: Modi- visit-Mysore-Bangalore- highway- vehicle –traffic- ban -tomorrow