ಮೋದಿ ಸರಕಾರದಿಂದ ಯುವಕರಿಗೆ ಉಚಿತ ಲ್ಯಾಪ್’ಟಾಪ್: ವೈರಲ್ ಆಯ್ತು ವಾಟ್ಸ್ ಆ್ಯಪ್ ಫೇಕ್ ನ್ಯೂಸ್ !

Promotion

ಬೆಂಗಳೂರು, ನವೆಂಬರ್ 09, 2021 (www.justkannada.in): ನರೇಂದ್ರ ಮೋದಿ ಸರಕಾರ ಯುವಕರಿಗೆ ಉಚಿತ ಲ್ಯಾಪ್ ಟಾಪ್ ನೀಡುವುದಾಗಿ ಘೋಷಣೆ ಮಾಡಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಈ ಸಂದೇಶ ಹರಿದಾಡುತ್ತಿದೆ.

ಉಚಿತ ಲ್ಯಾಪ್‌ಟಾಪ್ ವಿತರಣಾ ಯೋಜನೆಗೆ ಮುಂಚಿತವಾಗಿ ನೋಂದಾಯಿಸಿ. ಇದರೊಂದಿಗೆ, ಈ ಸಂದೇಶದಲ್ಲಿ ಲಿಂಕ್ ಒಂದನ್ನು ನೀಡಲಾಗಿದೆ. ಇದೀಗ ಸರ್ಕಾರಿ ಸಂಸ್ಥೆ ಪಿಐಬಿ ಈ ಬಗ್ಗೆ ಸತ್ಯಾಸತ್ಯತೆ ಪರಿಶೀಲನೆ ನಡೆಸಿದೆ.

ಪ್ರಧಾನಿಯವರ ಉಚಿತ ಲ್ಯಾಪ್‌ಟಾಪ್ ವಿತರಣಾ ಯೋಜನೆಯಡಿ ಎಲ್ಲರಿಗೂ ಉಚಿತ ಲ್ಯಾಪ್‌ಟಾಪ್‌ಗಳನ್ನು ನೀಡಲಾಗುತ್ತಿದೆ ಎಂದು ನಕಲಿ #WhatsApp ಸಂದೇಶದಲ್ಲಿ ಹೇಳಲಾಗುತ್ತಿದೆ.

ಇಂತಹ ನಕಲಿ ಸಂದೇಶಗಳ ಬಗ್ಗೆ ಎಚ್ಚರದಿಂದಿರಿ. ಇವುಗಳನ್ನು ಫಾರ್ವರ್ಡ್ ಮಾಡಬೇಡಿ/ಹಂಚಿಕೊಳ್ಳಬೇಡಿ. ಅಂತಹ ಲಿಂಕ್‌ಗಳು ಮತ್ತು ವೆಬ್‌ಸೈಟ್‌ಗಳಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸಹ ಹಂಚಿಕೊಳ್ಳಬೇಡಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.