ಇಂದು ವಡೋದರಾದಲ್ಲಿ ಸಿ-295(C-295) ಸಾರಿಗೆ ವಿಮಾನ ತಯಾರಿಕಾ ಘಟಕಕ್ಕೆ ಮೋದಿ ಶಂಕುಸ್ಥಾಪನೆ

Rajiv Gandhi Health university- Founding Day-Prime Minister Modi -praises -Karnataka government
Promotion

ಬೆಂಗಳೂರು, ಅಕ್ಟೋಬರ್ 30, 2022 (www.justkannada.in): ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನ ವಡೋದರಾದಲ್ಲಿ ಸಿ-295(C-295) ಸಾರಿಗೆ ವಿಮಾನ ತಯಾರಿಕಾ ಘಟಕಕ್ಕೆ ಶಂಕುಸ್ಥಾಪನೆ ಮಾಡಲಿದ್ದಾರೆ.

ವಡೋದರಾದಲ್ಲಿ ಭಾರತೀಯ ವಾಯುಪಡೆಗೆ (ಐಎಎಫ್) C-295 ಸಾರಿಗೆ ವಿಮಾನವನ್ನು ತಯಾರಿಸಲಿದೆ ಎಂದು ರಕ್ಷಣಾ ಸಚಿವಾಲಯ ಗುರುವಾರ ಪ್ರಕಟಿಸಿದೆ.

ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh), ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಎಂ ಸಿಂಧಿಯಾ ಮತ್ತು ಗುಜರಾತ್ ಸಿಎಂ ಭೂಪೇಂದ್ರಭಾಯಿ ಪಟೇಲ್ ಪಾಲ್ಗೊಳ್ಳಲಿದ್ದಾರೆ.

ಯುರೋಪಿಯನ್ ರಕ್ಷಣಾ ದೈತ್ಯ ಏರ್‌ಬಸ್ ಮತ್ತು ಟಾಟಾ ಸಮೂಹವನ್ನು ಒಳಗೊಂಡಿರುವ ಒಕ್ಕೂಟವು ವಡೋದರಾದಲ್ಲಿ ಭಾರತೀಯ ವಾಯುಪಡೆಗೆ (ಐಎಎಫ್) C-295 ಸಾರಿಗೆ ವಿಮಾನವನ್ನು ತಯಾರಿಸಲಿದೆ.