‘ಕಾಂತಾರಾ’ ಕಲೆಕ್ಷನ್ ಮೀರಿಸುತ್ತಾ ಅಪ್ಪು ‘ಗಂಧದಗುಡಿ’

ಬೆಂಗಳೂರು, ಅಕ್ಟೋಬರ್ 30, 2022 (www.justkannada.in): ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಗಂಧದಗುಡಿ ಚಿತ್ರ ರಾಜ್ಯಾದ್ಯಂತ ಮೊದಲ ದಿನ 5 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.

ಗಂಧದಗುಡಿ ಮೊದಲ ದಿನ ಎಷ್ಟು ಕಲೆಕ್ಷನ್ ಮಾಡಿದೆ ಎಂಬುದನ್ನು ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಬಾಕ್ಸ್ ಆಫೀಸ್ ಪರಿಣಿತರ ಪ್ರಕಾರ ಗಂಧದಗುಡಿ ಚಿತ್ರ 5 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.

ದೇಶದಾದ್ಯಂತ ಮೊದಲನೇ ದಿನ ಗಂಧದ ಗುಡಿ ಚಿತ್ರದ 62.77% ಟಿಕೆಟ್ ಮಾರಾಟವಾಗಿದೆ. ಇನ್ನು ಮೊದಲ ದಿನಕ್ಕಿಂತ ಎರಡನೇ ದಿನದ ಬುಕ್ಕಿಂಗ್ ಭರ್ಜರಿಯಾಗಿಯೇ ನಡೆದಿದೆ ಎನ್ನಲಾಗಿದೆ.

ಎರಡನೇ ದಿನವೂ ಗಂಧದಗುಡಿ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಗಳಿಕೆ ಮಾಡುವ ಸಾಧ್ಯತೆಯಿದೆ. ಮುಂಗಡ ಬುಕಿಂಗ್ ಮೂಲಕವೇ ಕೋಟಿ ಗಳಿಕೆ, ಪ್ರೀಮಿಯರ್‌ ಶೋನಲ್ಲೂ ಉತ್ತಮ ಗಳಿಕೆ ಕಂಡಿದೆ.