ಬಿಜೆಪಿ ಸರ್ಕಾರ ರಚನೆಗೆ ಕಾರಣರಾದ ಈ ಮೂವರಿಗೆ ಎಂಎಲ್ ಸಿ ಸ್ಥಾನ ನೀಡಿ- ಅಬಕಾರಿ ಸಚಿವ ಹೆಚ್. ನಾಗೇಶ್…

MLC -place -formation - BJP government- Excise Minister -Nagesh.
Promotion

ಕೋಲಾರ,ಜೂ,5,2020(www.justkannada.in):  ಬಿಜೆಪಿ ಸರ್ಕಾರ ರಚನೆಯಾಗಲು ಎಂಟಿಬಿ ನಾಗರಾಜ್, ಹೆಚ್.ವಿಶ್ವನಾಥ್, ಆರ್.ಶಂಕರ್ ಕಾರಣ. ಹೀಗಾಗಿ ಅವರಿಗೆ ವಿಧಾನ ಪರಿಷತ್ ಸ್ಥಾನ ನೀಡಬೇಕು ಎಂದು ಅಬಕಾರಿ ಸಚಿವ ಹೆಚ್.ನಾಗೇಶ್ ಆಗ್ರಹಿಸಿದರು.MLC -place -formation - BJP government- Excise Minister -Nagesh.

ಕೋಲಾರದಲ್ಲಿ ಇಂದು ಮಾತನಾಡಿದ ಸಚಿವ ನಾಗೇಶ್, ಬಿಜೆಪಿ ಸರ್ಕಾರ ರಚನೆಗೆ ಎಂಟಿಬಿ ನಾಗರಾಜ್, ಹೆಚ್.ವಿಶ್ವನಾಥ್, ಆರ್.ಶಂಕರ್ ಕಾರಣ. ಅಧಿಕಾರಕ್ಕೆ ಬರಲು 18 ಜನರ ಪಾತ್ರ ಮುಖ್ಯ. ಇಲ್ಲದಿದ್ದರೇ ಬಿಜೆಪಿ ವಿಪಕ್ಷ ಸ್ಥಾನದಲ್ಲಿರುತ್ತಿತ್ತು. ಅದ್ದರಿಂದ ಮೂವರಿಗೂ ಎಂಎಲ್ ಸಿ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.

ಸಿಎಂ ಬಿಎಸ್ ಯಡಿಯೂರಪ್ಪ ಕೊಟ್ಟ ಮಾತು ತಪ್ಪುವುದಿಲ್ಲ. ಮಾತುಕೊಟ್ಟಂತೆ ನಡೆದುಕೊಳ್ಳುತ್ತಾರೆ ಎಂದು ಸಚಿವ ಹೆಚ್.ನಾಗೇಶ್ ವಿಶ್ವಾಸ ವ್ಯಕ್ತಪಡಿಸಿದರು.

Key words: MLC -place -formation – BJP government- Excise Minister -Nagesh.