ಸಿಎಂ ಬಿಎಸ್ ವೈ ರಾಜೀನಾಮೆಗೆ ಆಗ್ರಹಿಸಿದ ವಿಪಕ್ಷಗಳಿಗೆ ಎಂಎಲ್ ಸಿ ಹೆಚ್.ವಿಶ್ವನಾಥ್ ತಿರುಗೇಟು ನೀಡಿದ್ದು ಹೀಗೆ…

Promotion

ಮೈಸೂರು,ಡಿಸೆಂಬರ್,25,2020(www.justkannada.in): ಡಿನೋಟಿಫಿಕೇಶನ್ ಹಿನ್ನೆಲೆಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಅವರ  ರಾಜೀನಾಮೆಗೆ ಆಗ್ರಹಿಸಿದ ವಿಪಕ್ಷಗಳ ನಾಯಕರಿಗೆ  ಬಿಜೆಪಿ ವಿಧಾನಪರಿಷತ್ ಸದಸ್ಯ ವಿಶ್ವನಾಥ್ ತಿರುಗೇಟು ನೀಡಿದ್ದಾರೆ.Teachers,solve,problems,Government,bound,Minister,R.Ashok

ಡಿನೋಟಿಫಿಕೇಶನ್ ವಿಚಾರವಾಗಿ ಯಡಿಯೂರಪ್ಪ ಅವರು ಜೈಲಿಗೆ ಹೋಗಬೇಕು ಎನ್ನುತ್ತಿದ್ದೀರಿ. ನೀವು ಮಾಡಿರುವುದನ್ನು ಹೊರಗಡೆ ತನ್ನಿ. ಅರ್ಕಾವತಿ ಡಿನೋಟಿಫಿಕೇಶನ್ ವಿಚಾರ ಹೊರಗೆ ಬಂದರೆ ನೀವೂ ಎಲ್ಲಿಗೆ ಹೋಗುತ್ತೀರಾ ಅಂತ ಗೊತ್ತಾಗುತ್ತೆ ಎಂದು ವಿಪಕ್ಷಗಳಿಗೆ ಎಂಎಲ್ ಸಿ ಹೆಚ್.ವಿಶ್ವನಾಥ್ ಟಾಂಗ್ ನೀಡಿದ್ದಾರೆ.

ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಹೆಚ್.ವಿಶ್ವನಾಥ್,  ರಾಜಕೀಯ ಎಂದ ಮೇಲೆ ಆರೋಪ ಪ್ರತ್ಯಾರೋಪಗಳು ಸಹಜ. ಆದರೆ ವಸ್ತುಸ್ಥಿತಿಯೇ ಬೇರೆ ಇರುತ್ತದೆ. ರಾಜಕೀಯ, ರಾಡಿಯ ಹಿಂದೆ ಮಾತನಾಡಬಾರದು. ಇವರು ಜೈಲಿಗೆ ಹೋಗಿದ್ದರು, ಅವರು ಜೈಲಿಗೆ ಹೋಗಿದ್ದರು ಅನ್ನುವ ಮಾತುಗಳೆಲ್ಲಾ ದೊಡ್ಡವರ ಬಾಯಲ್ಲಿ ಬರಬಾರದು. ಜವಾಬ್ದಾರಿಯುತ ರಾಜಕೀಯ ನಾಯಕರು ಶಾಂತಿಯ ವಾತಾವರಣ ನಿರ್ಮಾಣ ಮಾಡಬೇಕು. ಮಾನಸಿಕ ನೆಮ್ಮದಿ ಕದಡುವ ಮಾತುಗಳು ಯಾರಿಂದಲೂ ಬರಬಾರದು ಎಂದು ಸಲಹೆ ನೀಡಿದರು.mlc-h-vishwanath-speech-opposition-demanding-resignation-cm-bs-yeddyurappa

ಡಿನೋಟಿಫಿಕೇಶನ್ ವಿಚಾರವಾಗಿ ಯಡಿಯೂರಪ್ಪನವರು ಜೈಲಿಗೆ ಹೋಗಬೇಕು ಎನ್ನುತ್ತೀದ್ದೀರಿ. ನೀವು ಮಾಡಿರುವುದನ್ನು ಹೊರಗಡೆ ತನ್ನಿ. ಅರ್ಕಾವತಿ ಡಿನೋಟಿಫಿಕೇಶನ್ ವಿಚಾರ ಹೊರಗೆ ಬಂದರೆ ನೀವೂ ಎಲ್ಲಿಗೆ ಹೋಗುತ್ತೀರಾ ಅಂತ ಗೊತ್ತಾಗುತ್ತೆ ಎಂದು ಸಿಎಂ  ಬಿಎಸ್ ವೈ ರಾಜೀನಾಮೆಗೆ ಆಗ್ರಹಿಸಿದ ವಿರೋಧ ಪಕ್ಷಗಳಿಗೆ ಹೆಚ್. ವಿಶ್ವನಾಥ್ ತಿರುಗೇಟು ನೀಡಿದರು.

Key words: MLC -H Vishwanath – speech – opposition -demanding – resignation -CM BS yeddyurappa