ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ಧ ಎಂಎಲ್ ಸಿ ಹೆಚ್. ವಿಶ್ವನಾಥ್ ಗೆ ಶಾಸಕ ಯತೀಂದ್ರ ಸಿದ್ಧರಾಮಯ್ಯ ತಿರುಗೇಟು.

Promotion

ಮೈಸೂರು,ಫೆಬ್ರವರಿ,2,2022(www.justkannada.in):  ಇತ್ತಿಚೆಗೆ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ಧ  ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಗೆ ಶಾಸಕ ಯತೀಂದ್ರ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, ವಿಶ್ವನಾಥ್ ರಾಜಕೀಯಕ್ಕಾಗಿ ಆರೋಪ ಮಾಡುತ್ತಾರೆ. ಬಿಜೆಪಿ ಪಕ್ಷದಲ್ಲೇ ಅವರಿಗೆ ಯಾವುದೇ ಮಾನ್ಯತೆ ಇಲ್ಲ. ಅದಕ್ಕಾಗಿ ‌ಬೇರೆ ಪಕ್ಷದ ಬಗ್ಗೆ ಮಾತನಾಡುತ್ತಾರೆ. ನಮ್ಮ‌ ನಾಯಕರಾದ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷವನ್ನು ಬೆಳಸುವುದಕ್ಕೆ ಆದ್ಯತೆ ನೀಡಿದ್ದಾರೆ‌. ಯಾವುದೇ ಕಾರಣಕ್ಕೂ ಕೃತಜ್ಞತೆ ಇಲ್ಲದ ರೀತಿ ನಡೆದು ಕೊಂಡಿಲ್ಲ ಎಂದರು.

ಸಿಎಂ‌ ಇಬ್ರಾಹಿಂ ಪಕ್ಷ  ಬಿಟ್ಟ ಮೇಲೆ ಇದನ್ನೆಲ್ಲಾ ಮಾತನಾಡಿದ್ದಾರೆ. ಪಕ್ಷ ಅವರಿಗೆ ಟಿಕೆಟ್ ಕೊಟ್ಟು ಎಂಎಲ್ಸಿ ಮಾಡಿದೆ. ಆದರೆ ಈಗ ಅಧಿಕಾರ ಇಲ್ಲ ಅಂತ ಪಕ್ಷ ಬಿಟ್ಟು ಹೋಗಿದ್ದಾರೆ‌. ನಾವು ಯಾರನ್ನು ಹಣ ಕೊಟ್ಟು ಖರೀದಿ ಮಾಡಿಲ್ಲ. ಚುನಾವಣೆ ಹತ್ತಿರ ಬಂದಾಗ ಬಿಜೆಪಿಯಿಂದ ಎಷ್ಟು ಜನ ಶಾಸಕರು ಪಕ್ಷಕ್ಕೆ‌ ಬರುತ್ತಾರೆ ಎಂದು ಗೊತ್ತಾಗುತ್ತದೆ. ನಾವು ಬಿಜೆಪಿಯವರ ರೀತಿ ಆಪರೇಷನ್ ಮಾಡಲ್ಲ. ಭ್ರಷ್ಟಾಚಾರದ ಹಣದಿಂದ  ಶಾಸಕರನ್ನು ಖರೀದಿ ಮಾಡಲ್ಲ. ನಾವು ಸರ್ಕಾರವನ್ನು ಬೀಳಿಸಬೇಕಿಲ್ಲ. ಚುನಾವಣೆ ಹತ್ತಿರ ಬಂದಾಗ ಅವರ ನಮ್ಮ ಹತ್ತಿರ ಬರ್ತಾರೆ‌ ಎಂದು ಶಾಸಕ ಯತೀಂದ್ರ ಸಿದ್ಧರಾಮಯ್ಯ ಹೇಳಿಕೆ ನೀಡಿದರು.

Key words: MLC-H.vishwanath-MLA-yathindra siddaramaiaha