ಕೆ.ಆರ್ ಆಸ್ಪತ್ರೆಗೆ ಆ್ಯಂಬುಲೆನ್ಸ್ ಹಸ್ತಾಂತರಿಸಿದ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್.

Promotion

ಮೈಸೂರು,ಜುಲೈ,25,2022(www.justkannada.in): ಹುಟ್ಟು ಹಬ್ಬದ ಪ್ರಯುಕ್ತ ರಾಯಚೂರು ಮೂಲದ ಸ್ನೇಹಿತರು ಗಿಪ್ಟ್ ನೀಡಿದ್ದ ಆ್ಯಂಬುಲೆನ್ಸ್ ಅನ್ನು  ವಿಧಾನ ಪರಿಷತ್ ಬಿಜೆಪಿ ಸದಸ್ಯ ಎಚ್ ವಿಶ್ವನಾಥ್ ಕೆ.ಆರ್ ಆಸ್ಪತ್ರೆಗೆ ಹಸ್ತಾಂತರಿಸಿದರು.

ಹುಟ್ಟು ಹಬ್ಬದ ಪ್ರಯುಕ್ತ ರಾಯಚೂರು ಮೂಲದ ಸ್ನೇಹಿತರು ಹೆಚ್.ವಿಶ್ವನಾಥ್ ಅವರಿಗೆ ಆ್ಯಂಬುಲೆನ್ಸ್ ಗಿಫ್ಟ್ ನೀಡಿದ್ದರು. ಸಾರ್ವಜನಿಕ ಉಪಯೋಗಕ್ಕಾಗಿ ಕೆ.ಆರ್ ಆಸ್ಪತ್ರೆಗೆ ಹಸ್ತಾಂತರ. ಕೆಆರ್ ಆಸ್ಪತ್ರೆ ನೆಪ್ರೊ ಯುರಾಲಜಿ ವಿಭಾಗಕ್ಕೆ ಆಂಬ್ಯುಲೆನ್ಸ್  ಹಸ್ತಾಂತರಿಸಿದರು.

ಕೆ.ಆರ್.ಆಸ್ಪತ್ರೆ ವೈದ್ಯಾದಿಕಾರಿಗಳು ಮತ್ತು ಸಿಬ್ಬಂದಿಗಳ ಸಮ್ಮುಖದಲ್ಲಿ ಹೆಚ್.ವಿಶ್ವನಾಥ್ ವಿಶೇಷ ಪೂಜೆ ಮಾಡಿಸಿ ಕೀ ಹಸ್ತಾಂತರಿಸಿದರು.

Key words: MLC-H. Vishwanath -handed over – ambulance -KR Hospital