ಇಡಿ ದಾಳಿ ಕುರಿತು ಶಾಸಕ ಜಮೀರ್ ಅಹ್ಮದ್ ಖಾನ್ ಪ್ರತಿಕ್ರಿಯಿಸಿದ್ದು ಹೀಗೆ…?

Promotion

ಬೆಂಗಳೂರು,ಆಗಸ್ಟ್,6,2021(www.justkannada.in):  ಕಾಂಗ್ರೆಸ್​ ಶಾಸಕ ಜಮೀರ್​ ಅಹ್ಮದ್​ ಮನೆ ಹಾಗೂ ಕಚೇರಿ ಮೇಲೆ ನಿನ್ನೆ ED ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.  ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಜಮೀರ್ ಅಹ್ಮದ್ಖಾನ್,  ನನ್ನ ರಾಜಕೀಯ ವಿರೋಧಿಗಳು ಜಾರಿ ನಿರ್ದೇಶನಾಲಯಕ್ಕೆ ದೂರು ‌ನೀಡಿರಬಹುದು. ಇವಾಗ ಎಲ್ಲಾ ಕ್ಲಿಯರ್ ಆಗಿದೆ. ನನಗೂ ಈಗ ಸಮಾಧಾನ ಎಂದು ಹೇಳಿದ್ದಾರೆ.

ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ಜಮೀರ್ ಅಹ್ಮದ್ ಖಾನ್,  ನನ್ನ ಮನೆಯ ನಿರ್ಮಾಣದ ಸಂಬಂಧ ED ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಧಿಕಾರಿಗಳಿಗೆ ಎಲ್ಲಾ ಸಹಕಾರ ನೀಡಿದ್ದೇವೆ. ಮನೆ ನಿರ್ಮಾಣಕ್ಕೆ ಮಾಡಿದ ವೆಚ್ಚದ ಬಗ್ಗೆ ಮಾಹಿತಿ ಕೇಳಿದ್ರು. ನಾನು 2006ರಲ್ಲಿ ಈ ಜಾಗ ತೆಗೆದುಕೊಂಡಾಗಿನಿಂದ ದಾಖಲೆ ನೀಡಿದ್ದೇನೆ ಎಂದರು.

ನನಗೂ ಐಎಂಎಗೂ ಸಂಬಂಧವಿಲ್ಲ. ಮನೆ ಮತ್ತು ಟ್ರಾವೆಲ್ಸ್ ಗಳ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಇದು ರಾಜಕೀಯ ಪ್ರೇರಿತ ದಾಳಿ. ಏನೋ ಸಿಗುತ್ತೆ ಅಂತಾ ಬಂದ್ರು. ಆದರೆ ಏನು ಸಿಗಲಿಲ್ಲ. ರಾಜಕೀಯ ವಿರೋಧಿಗಳು ದೂರು ನೀಡಿರಬಹುದು. ದೂರಿನಿಂದ ಈಗ ಎಲ್ಲಾ ಕ್ಲಿಯರ್ ಆಗಿದೆ.

ನನೆಗ ಮತ್ತೆ ಯಾವುದೇ ನೋಟಿಸ್​ ನೀಡಿಲ್ಲ. ಅವರು ಕರೆದರೆ ನಾನು ಯಾವಾಗ ಬೇಕಾದರೂ ವಿಚಾರಣೆಗೆ  ಹೋಗುತ್ತೇನೆ ಎಂದು ಜಮೀರ್ ತಿಳಿಸಿದ್ದಾರೆ.

Key words: MLA- Zamir Ahmed Khan – ED- attack.