ಯಾವುದೇ ಖಾತೆ ನೀಡಿದರೂ ನಿಭಾಯಿಸಲು ಸಿದ್ಧ- ಶಾಸಕ ಗೋಪಾಲಯ್ಯ…

Promotion

ಬೆಂಗಳೂರು,ಜ,30,2020(www.justkannada.in):  ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚಿಸಲು ಇಂದು ಸಿಎಂ ಬಿಎಸ್ ಯಡಿಯೂರಪ್ಪ ದೆಹಲಿಗೆ ತೆರಳುತ್ತಿದ್ದು ಈ ಬೆನ್ನಲ್ಲೆ ನನಗೆ ಯಾವುದೇ ಖಾತೆ ನೀಡಿದರೂ ನಿಭಾಯಿಸಲು ಸಿದ್ಧ ಎಂದು ಮಹಾಲಕ್ಷ್ಮೀ ಲೇಔಟ್ ಶಾಸಕ ಗೋಪಾಲಯ್ಯ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಈ ಬಗ್ಗೆ ಇಂದು ಮಾತನಾಡಿದ ಶಾಸಕ ಗೋಪಾಲಯ್ಯ, ಸಿಎಂ ಬಿಎಸ್ ವೈ ಮೇಲೆ ವಿಶ್ವಾಸವಿದೆ. ಬಿಜೆಪಿ ಶಾಸಕರ ಬೆಂಬಲವಿದೆ. ನೂರಕ್ಕೆ ನೂರರಷ್ಟು ಸಿಎಂ ಬಿಎಸ್ ವೈ ಮೇಲೆ ಭರವಸೆ ಇದೆ. ನನಗೆ ಯಾವುದೇ ಖಾತೆ ನೀಡಿದರೂ ನಿಭಾಯಿಸಲು ಸಿದ್ಧ ಎಂದು ತಿಳಿಸಿದರು.

ಹಾಗೆಯೇ ಸೋತವರಿಗೆ ಮಂತ್ರಿಸ್ಥಾನ ವಿಚಾರ ಕುರಿತು ಪ್ರತಿಕ್ರಿಯಿಸಿದ ಶಾಸಕ ಗೋಪಾಲಯ್ಯ, ಮುಂದಿನ ದಿನಗಳಲ್ಲಿ ಸೋತವರಿಗೂ ಸಚಿವ ಸ್ಥಾನ ಸಿಗುತ್ತೆ ಎಂದು ತಿಳಿಸಿದರು.

Key words: MLA Gopaliah-minister position-bjp-cabinet expension