Thursday, September 17, 2026

BDA Apartments

ಗ್ಯಾರಂಟಿ ಯೋಜನೆ ಜಾರಿ ವಿಚಾರದಲ್ಲಿ ಷರತ್ತು ಹಾಕಿರುವ ಸರ್ಕಾರದ ನಡೆಗೆ ಶಾಸಕ ...
Home Front Page ಗ್ಯಾರಂಟಿ ಯೋಜನೆ ಜಾರಿ ವಿಚಾರದಲ್ಲಿ ಷರತ್ತು ಹಾಕಿರುವ ಸರ್ಕಾರದ ನಡೆಗೆ ಶಾಸಕ ಬಿ.ವೈ ವಿಜಯೇಂದ್ರ ಟೀಕೆ.

ಗ್ಯಾರಂಟಿ ಯೋಜನೆ ಜಾರಿ ವಿಚಾರದಲ್ಲಿ ಷರತ್ತು ಹಾಕಿರುವ ಸರ್ಕಾರದ ನಡೆಗೆ ಶಾಸಕ ಬಿ.ವೈ ವಿಜಯೇಂದ್ರ ಟೀಕೆ.

ಮೈಸೂರು,ಜೂನ್,5,2023(www.justkannada.in): ಗ್ಯಾರಂಟಿ ಯೋಜನೆ ಜಾರಿ ವಿಚಾರದಲ್ಲಿ ಷರತ್ತು ಹಾಕಿರುವ ರಾಜ್ಯ ಸರ್ಕಾರದ ನಡೆಯನ್ನ ಶಾಸಕ ಬಿ.ವೈ ವಿಜಯೇಂದ್ರ ಟೀಕಿಸಿದ್ದಾರೆ.

ಈ ಕುರಿತು ಇಂದು ಮೈಸೂರಿನಲ್ಲಿ ಮಾತನಾಡಿದ ಶಾಸಕ ಬಿವೈ ವಿಜಯೇಂದ್ರ, ಗ್ಯಾರಂಟಿ ಯೋಜನೆಗಳ ಜಾರಿ ವಿಚಾರದಲ್ಲಿ ಷರತ್ತು ಹಾಕಬಾರದು. ಈಗಾಗಲೇ ವಿದ್ಯುತ್ ಬಿಲ್ ಹೆಚ್ಚಳ ಮಾಡಿದ್ದಾರೆ. ಗ್ಯಾರಂಟಿ ಜಾರಿ ಮಾಡಲು ಹೆಚ್ಚು ಹೆಚ್ಚು ತೆರಿಗೆ ವಿಧಿಸುತ್ತಿದ್ದಾರೆ. ಗ್ಯಾರಂಟಿ ಕಾರ್ಡ್ ಒಂದು ಕಡೆ ಮತ್ತೊಂದು ಕಡೆ ಗ್ರಾಹಕರಿಗೆ ಪೆಟ್ಟು ನೀಡುತ್ತಿದ್ದಾರೆ. ಬಿಜೆಪಿ ಕಾದು ನೋಡುತ್ತಿದೆ, ಜವಾಬ್ದಾರಿಯುತ ಪ್ರತಿಪಕ್ಷವಾಗಿ ಹೋರಾಟ ಮಾಡುತ್ತೇವೆ  ಎಂದು ಹೇಳಿದರು.ಗ್ಯಾರಂಟಿ ಯೋಜನೆ ಜಾರಿ ವಿಚಾರದಲ್ಲಿ ಷರತ್ತು ಹಾಕಿರುವ ಸರ್ಕಾರದ ನಡೆಗೆ ಶಾಸಕ ...

ಚುನಾವಣಾ ಸಂದರ್ಭದಲ್ಲಿ ಏನೇನು ಆಶ್ವಾಸನೆ ಕೊಟ್ಟಿದ್ದರು ಜನರು ಸಾಕಷ್ಟ ನೀರಿಕ್ಷೆಯಲ್ಲಿದ್ದಾರೆ. ಈಗಾಗಲೇ ಘೋಷಣೆ ಮಾಡಿರುವ  ಗ್ಯಾರಂಟಿ ಯೋಜನೆಗಳಿಗೆ ಸಾಕಷ್ಟು ಷರತ್ತು ವಿಧಿಸುತ್ತಿದ್ದಾರೆ ಇದು ಸರಿಯಲ್ಲ ಎಂದು ಕಿಡಿಕಾರಿದರು.

Key words: MLA -B.Y. Vijayendra- criticized – government’s – conditions -guarantee scheme.