ಟಿ-20 ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ ಮಿಥಾಲಿ ರಾಜ್

Promotion

ನವದೆಹಲಿ, ಸೆಪ್ಟೆಂಬರ್ 04, 2019 (www.justkannada.in) ಮಿಥಾಲಿ ರಾಜ್ ಅಂತಾರಾಷ್ಟ್ರೀಯ ಟ್ವೆಂಟಿ-20 ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.

ಇದೇ 24ರಿಂದ ದಕ್ಷಿಣ ಆಫ್ರಿಕಾ ಎದುರು ಭಾರತದಲ್ಲಿ ನಡೆಯಲಿರುವ ಸರಣಿಯಲ್ಲಿ ತಾವು ಆಡುವುದಾಗಿ ಮಿಥಾಲಿ ಹೋದ ವಾರ ತಿಳಿಸಿದ್ದರು. ಆದರೆ ಇದೀಗ ಅವರ ನಿವೃತ್ತಿ ಘೋಷಣೆಯು ಅಚ್ಚರಿ ಮೂಡಿಸಿದೆ.

‘ಏಕದಿನ ಕ್ರಿಕೆಟ್‌ನಲ್ಲಿ ಮುಂದುವರಿಯಲಿದ್ದು, 2021ರ ಏಕದಿನ ಕ್ರಿಕೆಟ್ ವಿಶ್ವಕಪ್‌ ಟೂರ್ನಿಯಲ್ಲಿ ಆಡುತ್ತೇನೆ. ನ್ಯೂಜಿಲೆಂಡ್‌ನಲ್ಲಿ ಟೂರ್ನಿಯ ನಡೆಯಲಿದೆ’ ಎಂದು 36 ವರ್ಷದ ಮಿಥಾಲಿ ತಿಳಿಸಿದ್ದಾರೆ. ‌