ಮಾವಿನಕಾಯಿ ಸಾಬುದಾನಿ ಮಾಡುವ ವಿಧಾನ

ಬೇಕಾಗುವ ಸಾಮಗ್ರಿಗಳು:

ಸಾಬುದಾನಿ-2 ಬಟ್ಟಲು, ಹಸಿ ಮೆಣಸಿನಕಾಯಿ-4, ಕಾಯಿತುರಿ-ಸ್ವಲ್ಪ, ಮಾವಿನಕಾಯಿ ತುರಿ-ಸ್ವಲ್ಪ, ಕೊತ್ತಂಬರಿ ಸೊಪ್ಪು-ಸ್ವಲ್ಪ, ಜೀರಿಗೆ- ಅರ್ಧ ಟೀ ಸ್ಪೂನ್‌, ಶೇಂಗಾ ಪುಡಿ-ಸ್ವಲ್ಪ, ಒಗ್ಗರಣೆಗೆ ಎಣ್ಣೆ, ಸಾಸಿವೆ, ಇಂಗು, ಕರಿಬೇವು

ಮಾಡುವ ವಿಧಾನ: ಹಿಂದಿನ ರಾತ್ರಿ ಸಾಬುದಾನಿಯನ್ನು ಎರಡು ಬಾರಿ ಚೆನ್ನಾಗಿ ತೊಳೆದು ನೀರು ಬಸಿದು ಮುಚ್ಚಿಡಿ. ಮರುದಿನ ಬೆಳಗ್ಗೆ ಬಾಣಲೆಯಲ್ಲಿಎಣ್ಣೆ ಕಾಯಿಸಿ ಸಾಸಿವೆ, ಹೆಚ್ಚಿದ ಹಸಿ ಮೆಣಸಿನಕಾಯಿ, ಇಂಗು, ಜೀರಿಗೆ, ಕರಿಬೇವು ಹಾಕಿ ಹುರಿದು ಕೆಳಗಿಳಿಸಿ. ಈ ಒಗ್ಗರಣೆಯ ಮಿಶ್ರಣ ಸ್ವಲ್ಪ ತಣ್ಣಗಾದ ನಂತರ ಅದಕ್ಕೆ ಸಾಬುದಾನಿಯನ್ನು ಹಾಕಿ ಅದರ ಮೇಲೆ ಕೊಬ್ಬರಿ ತುರಿ, ಮಾವಿನಕಾಯಿ ತುರಿ, ಹೆಚ್ಚಿದ ಕೊತ್ತಂಬರಿ ಸೊಪ್ಪು, ಉಪ್ಪು, ಶೇಂಗಾ ಪುಡಿ ಸೇರಿಸಿ ಚೆನ್ನಾಗಿ ತಿರುವಿ ಒಲೆ ಮೇಲಿಟ್ಟು ಮುಚ್ಚಳ ಮುಚ್ಚಿ ಐದು ನಿಮಿಷ ಬೇಯಿಸಿ ಮತ್ತೊಮ್ಮೆ ಚೆನ್ನಾಗಿ ತಿರುವಿದರೆ ಮಾವಿನಕಾಯಿ ಸಾಬುದಾನಿ ರೆಡಿ.