ಮತದಾರರ ಪಟ್ಟಿ ನವೀಕರಣಕ್ಕೆ ನೀಡಿದ್ದ ಅನುಮತಿ ದುರ್ಬಳಕೆ: ಸಿಎಂ ರಾಜೀನಾಮೆ ಮತ್ತು ಎಫ್ ಐಆರ್ ದಾಖಲಿಗೆ ಸಿದ್ಧರಾಮಯ್ಯ ಒತ್ತಾಯ.

Promotion

ಬೆಂಗಳೂರು,ನವೆಂಬರ್,17,2022(www.justkannada.in): ಮತದಾರರ ಪಟ್ಟಿ ನವೀಕರಣಕ್ಕೆ ನೀಡಿದ್ದ ಅನುಮತಿಯನ್ನ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಇದರ ಹೊಣೆ ಹೊತ್ತು  ಸಿಎಂ ಬಸವರಾಜ ಬೊಮ್ಮಾಯಿ ರಾಜೀನಾಮೆ ನೀಡಬೇಕು ಮತ್ತು ಎಫ್ ಐಆರ್ ದಾಖಲಿಸಬೇಕು ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಒತ್ತಾಯಿಸಿದರು.

ಈ ಕುರಿತು ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಸಿದ್ಧರಾಮಯ್ಯ, ಈ ಅಕ್ರಮದ ಹಿಂದೆ ಸಿಎಂ ಬೊಮ್ಮಾಯಿ ಇದ್ದಾರೆ.  ಇದರ ಹೊಣೆ ಹೊತ್ತು ಸಿಎಂ ಬೊಮ್ಮಾಯಿ ರಾಜೀನಾಮೆ ನೀಡಬೇಕು. ಸಿಎಂ ಬಸವರಾಜ ಬೊಮ್ಮಾಯಿ. ನೇರವಾಗಿ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ವಾಮಮಾರ್ಗದಲ್ಲಿ ಚುನಾವಣೆಯಲ್ಲಿ ಗೆಲ್ಲಲು ಯತ್ನಿಸಿದ್ದಾರೆ.

ಇದು ಸಿಎಂ ಬಿಜೆಪಿ ಚುನಾವಣಾಧಿಕಾರಿ ಮಾಡಿರುವ ಸಂಚು. ತಕ್ಷಣ ಸಿಎಂ ಬೊಮ್ಮಾಯಿ ಅರೆಸ್ಟ್ ಮಾಡಬೇಕು. ಎಫ್ ಐಆರ್ ದಾಖಲಾಗದಿದ್ದರೇ ಮುಂದಿನ ಹೋರಾಟ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.

Key words: Misuse -permission -given – update- voter list- Siddaramaiah