ವೋಟರ್ ಐಡಿ ಅಕ್ರಮದ ಪಿತಾಮಹ ಅಶ್ವಥ್ ನಾರಾಯಣ್- ಸಮಗ್ರ ತನಿಖೆಗೆ ಡಿ.ಕೆ ಶಿವಕುಮಾರ್ ಆಗ್ರಹ.

ಬೆಂಗಳೂರು,ನವೆಂಬರ್,17,2022(www.justkannada.in): ರಾಜ್ಯ ಸರ್ಕಾರದ ವಿರುದ್ಧ ವೋಟರ್ ಐಡಿ ಅಕ್ರಮದ ಆರೋಪ ಕೇಳಿ ಬಂದಿದ್ದು ಮತದಾರರ ಪಟ್ಟಿ ನವೀಕರಣಕ್ಕೆ ನೀಡಿದ್ದ ಅನುಮತಿಯನ್ನ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಕಾಂಗ್ರೆಸ್ ನಾಯಕರು  ಆಗ್ರಹಿಸಿದ್ದಾರೆ.

ಈ ಸಂಬಂಧ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವೋಟರ್ ಐಡಿ ಅಕ್ರಮದ ಪಿತಾಮಹ ಅಶ್ವಥ್  ನಾರಾಯಣ್. ಅಶ್ವಥ್ ಸಹಕಾರ ಇಲ್ಲದೇ ಈ ರೀತಿ ನಡೆಯುತ್ತಾ..?  ಎಂದು ಪ್ರಶ್ನಿಸಿದರು.

ಮತದಾರರ ಮಾಹಿತಿ ಕಳವು ಪ್ರಜಾಪ್ರಭುತ್ವದ ಕಗ್ಗೋಲೆ. ಮತದಾರರ ಹಕ್ಕು ಕಿತ್ತುಕೊಳ್ಳುವ ಯತ್ನವಾಗಿದೆ. 18 ಸಾವಿರ ಜನರಿಗೆ ಐಡಿ ಕಾರ್ಡ್ ನೀಡಿದ್ದಾರೆ.  ಇದು ದೇಶದಲ್ಲೇ ಚರ್ಚೆಯಾಗಬೇಕಿರುವ ವಿಚಾರ.  ಕೂಡಲೇ ಚುನಾವಣಾ ಆಯೋಗ  ಈ ಬಗ್ಗೆ ಸಮಗ್ರ ತನಿಖೆ ಮಾಡಬೇಕು. ಅಕ್ರಮದಲ್ಲಿ ಭಾಗಿಯಾದವರ ಮೇಲೆ ಎಫ್ ಐಆರ್ ದಾಖಲಿಸಬೇಕು ಸಿಎಂ ಬೊಮ್ಮಾಯಿ ವಿರುದ್ದವೂ ಎಫ್ ಐ ಆರ್ ದಾಖಲಿಸಬೇಕು ಎಂದು ಡಿ.ಕೆ ಶಿವಕುಮಾರ್ ಒತ್ತಾಯಿಸಿದ್ದಾರೆ.

Key words: Ashwath Narayan – father – Voter ID- illegality- DK Shivakumar