ಕಾಂಗ್ರೆಸ್ ಆರೋಪ ಬೆನ್ನಲ್ಲೆ ವೋಟರ್ ಐಡಿ ನವೀಕರಣ ಮಾಡಿದ ಸಂಸ್ಥೆಗೆ ಬಿಬಿಎಂಪಿ ನೋಟಿಸ್.

ಬೆಂಗಳೂರು,ನವೆಂಬರ್,17,2022(www.justkannada.in): ಮತದಾರರ ಪಟ್ಟಿ ನವೀಕರಣಕ್ಕೆ ನೀಡಿದ್ದ ಅನುಮತಿಯನ್ನ ದುರ್ಬಳಕೆ  ಮಾಡಿಕೊಂಡಿರುವುದಾಗಿ ಕಾಂಗ್ರೆಸ್ ನಾಯಕರು ಆರೋಪ ಮಾಡಿದ ಬೆನ್ನಲ್ಲೆ ವೋಟರ್ ಐಡಿ ನವೀಕರಣ ಮಾಡಿದ ಸಂಸ್ಥೆಗೆ ಬಿಬಿಎಂಪಿ ನೋಟಿಸ್ ಜಾರಿ ಮಾಡಿದೆ.

ವೋಟರ್ ಐಡಿ ಅಕ್ರಮದ ಬಗ್ಗೆ ಕಾಂಗ್ರೆಸ್ ಆರೋಪದ ಬೆನ್ನಲ್ಲೆ ಎಚ್ಚೆತ್ತ ಬಿಬಿಎಂಪಿ, ವೋಟರ್ ಐಡಿ ನವೀಕರಣ ಮಾಡಿದ ಚಿಲುಮೆ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದೆ.  ವೈಯಕ್ತಿಕ ಮಾಹಿತಿ ಸೋರಿಕೆ ಆರೋಪ ಕುರಿತು ಉತ್ತರಿಸುವಂತೆ ಸೂಚನೆ ನೀಡಿದೆ.

ಮತದಾರರ ವೈಯಕ್ತಿಕ ಮಾಹಿತಿ ಸಂಗ್ರಹ ಮಾಡಲಾಗಿದೆಯಾ..?  ಯಾರ ಅನುಮತಿ ಮೇರೆಗೆ ಮಾಹಿತಿ ಸಂಗ್ರಹ  ಮಾಡಲಾಗಿದೆ. ಈ ಬಗ್ಗೆ ಉತ್ತರ ನೀಡುವಂತೆ ಚಿಲುಮೆ ಸಂಸ್ಥೆಗೆ ಬಿಬಿಎಂಪಿ ನೋಟಿಸ್ ನೀಡಿದೆ.

Key words: BBMP-notice -organization -voter ID-scam-  Congress- allegation.