ಸಿನಿಮೀಯ ಮಾದರಿಯಲ್ಲಿ ಎಟಿಎಂ ಗೆ ಕನ್ನ ಹಾಕಿದ ದರೋಡೆಕೋರರು…

Promotion

ಮೈಸೂರು,ಸೆಪ್ಟೆಂಬರ್,18,2020(www.justkannada.in) :  ನೆನ್ನೆ ತಡರಾತ್ರಿ ಸಿನಿಮೀಯ ಮಾದರಿಯಲ್ಲಿ ಎಟಿಎಂ ಒಡೆದು ಹಣ ದೋಚಿರುವ ಘಟನೆ ಮೈಸೂರಿನಲ್ಲಿ  ನಡೆದಿದೆ.

jk-logo-justkannada-logo

ಮೈಸೂರಿನ ರಾಣಿ ಮಡ್ರಾಸ್ ಕಾರ್ಖಾನೆಗೆ ಹೊಂದಿಕೊಂಡಿರುವ ಎಚ್ ಡಿ ಎಫ್ ಸಿ ಎಟಿಎಂ ನಲ್ಲಿ ವ್ಯವಸ್ಥಿತವಾಗಿ ಸಂಚು ರೂಪಿಸಿ ಎಟಿಎಂ ಹಣ ಎಗರಿಸಿರುವ ಘಟನೆ ಬೆಳಕಿಗೆ ಬಂದಿದೆ.

Mirror-ATM-cinematic-model

ಫಿಲ್ಮ್ ಸ್ಟೈಲ್ ನಲ್ಲಿ ಸಿಸಿ ಕ್ಯಾಮರಾಗಳಿಗೆ ಪೈಂಟ್ ಸ್ಪ್ರೇ ಸಿಂಪಡಿಸಿ, ಗ್ಯಾಸ್ ಕಟರ್ ಮೂಲಕ ಎಟಿಎಂ ಕೊರೆದು ಹಣ ದೋಚಿದ್ದಾರೆ. ಸ್ಥಳದಲ್ಲಿ ಕೃತ್ಯಕ್ಕೆ ಬಳಸಿದ್ದ ಗ್ಯಾಸ್ ಸಿಲಿಂಡರ್ ಹಾಗೂ ಗ್ಯಾಸ್ ಕಟರ್ ಪತ್ತೆಯಾಗಿದ್ದು, ವಿಜಯನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

key words : Mirror-ATM-cinematic-model